Saturday, May 4, 2024
spot_imgspot_img
spot_imgspot_img

12 ವರ್ಷದ ಬಳಿಕ ಕೊಡಗಿನಲ್ಲಿ ಅರಳಿದ ನೀಲಕುರಿಂಜಿ ಹೂವು; ನೀಲಿಮಯವಾಯ್ತು ಮಂದಲಪಟ್ಟಿ

- Advertisement -G L Acharya panikkar
- Advertisement -

ಮಡಿಕೇರಿ: ಪ್ರಕೃತಿಯಲ್ಲಿ ಸಾಕಷ್ಟು ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಮಲೆನಾಡು, ಕರಾವಳಿ ಭಾಗದಲ್ಲಿರುವ ಪಶ್ಚಿಮ ಘಟ್ಟಗಳಲ್ಲಿ ಇರುವ ಕಾಡಿನಲ್ಲಿ ವಿಸ್ಮಯಕಾರಿ ಹೂವು, ಹಣ್ಣುಗಳು ಬಿಡುತ್ತವೆ. ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರಮುಖವಾಗಿರುವ ಕೊಡಗಿನಲ್ಲಿ ಅತ್ಯುತ್ತಮ ಪ್ರದೇಶಗಳಿವೆ. ಅವುಗಳಲ್ಲಿ ಮಂದಲಪಟ್ಟಿ ಕೂಡ ಒಂದು. ಮಡಿಕೇರಿ ಬಳಿ ಇರುವ ಮಂದಲಪಟ್ಟಿಯಲ್ಲಿ 12 ವರ್ಷಗಳ ಬಳಿಕ ನೀಲಕುರಿಂಜಿ ಹೂವುಗಳು ಅರಳಿವೆ. ಇದರಿಂದ ಕೊಡಗಿನ ಮಂದಲಪಟ್ಟಿ ಬೆಟ್ಟ ಪೂರ್ತಿ ನೀಲಿಮಯವಾಗಿದೆ.

ಕೊರೊನಾ ನಡುವೆಯೂ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಈ ಅಪರೂಪದ ನೀಲಿ ಬಣ್ಣದ ಹೂಗಳು ಇಡೀ ಬೆಟ್ಟವನ್ನು ಆವರಿಸಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಒಂದು ವಾರದ ಹಿಂದೆ ಈ ನೀಲಿಕುರಿಂಜ ಹೂವುಗಳು ಅರಳಿದ್ದು, ಗುಂಪಾಗಿ ಗಿಡದ ತುಂಬ ಅರಳಿರುವ ಈ ಹೂಗಳನ್ನು ಇನ್ನೂ ಕೆಲವು ದಿನಗಳ ಕಾಲ ನೋಡಲು ಸಿಗಲಿವೆ. ಇದೇ ರೀತಿ ಚಿಕ್ಕಮಗಳೂರಿನಲ್ಲಿ ಕೂಡ ನೀಲಕುರಿಂಜಿ ಹೂಗಳು ಆಗುತ್ತವೆ.

ಕುರಿಂಜಿ ಹೂವುಗಳು ಎಂದು ಕರೆಯಲ್ಪಡುವ ಈ ನೀಲಿ ಹೂಗಳಿಗೆ ವೈಜ್ಞಾನಿಕವಾಗಿ ಸ್ಟ್ರೋಬಿಲಂಥೆಸ್ ಕುಂತಿಯಾನ ಎಂದು ಕರೆಯಲಾಗುತ್ತದೆ. 12 ವರ್ಷಗಳಿಗೊಮ್ಮೆ ಈ ಹೂವುಗಳು ಅರಳುತ್ತವೆ. ಈ ಅಪರೂಪದ ಹೂವುಗಳ ಫೋಟೋಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಈ ಹೂವುಗಳ ಸೌಂದರ್ಯವನ್ನು ನೋಡಲೆಂದೇ ಪ್ರವಾಸಿಗರು ಮಡಿಕೇರಿಯತ್ತ ಬರುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ ಕೂಡ ಈ ನೀಲಕುರಿಂಜಿ ಹೂವುಗಳ ಫೋಟೋಗಳು ಹರಿದಾಡುತ್ತಿವೆ.

ಈ ನೀಲಕುರಿಂಜಿ ಹೂವುಗಳಲ್ಲಿ ಹಲವು ಪ್ರಭೇದಗಳಿವೆ. 5ರಿಂದ 16 ವರ್ಷಗಳಿಗೊಮ್ಮೆ ಬಿಡುವ ಹೂವುಗಳೂ ಇವೆ. ಈ ಗಿಡಗಳು 60 ಸೆ.ಮೀ. ಉದ್ದ ಬೆಳೆಯುತ್ತವೆ. ಈ ಹೂವುಗಳು ಸುಮಾರು 2 ತಿಂಗಳ ಕಾಲ ಗಿಡದಲ್ಲೇ ಇರಲಿವೆ. ಹೀಗಾಗಿ, ಇನ್ನೂ ಒಂದೂವರೆ ತಿಂಗಳು ಪ್ರವಾಸಿಗರು ಈ ಹೂಗಳ ಸೌಂದರ್ಯವನ್ನು ಸವಿಯಬಹುದು.

- Advertisement -

Related news

error: Content is protected !!