- Advertisement -
- Advertisement -
ಡಯಾಲಿಸಿಸ್ನಿಂದ ಬೇಗ ಸಾವನ್ನಪ್ಪುತ್ತೇನೆ. ನನಗಿಂತ ಮೊದಲು ಹೆಂಡತಿ ಸಾಯಬೇಕೆಂದು ಗಂಡ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಸಿರುಗುಪ್ಪದ ಬಲಕುಂದಿ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆ ಬಲಕುಂದಿ ಗ್ರಾಮದ ನಿವಾಸಿ ಮೈಬುನಾ ಬಿ (35) ಕೊಲೆ ಮಾಡಿದ ವ್ಯಕ್ತಿ ರಸೂಲ್ ಸಾಬ್ ಎಂದು ಗುರುತಿಸಲಾಗಿದೆ.
ಇತ ಪದೇ ಪದೆ ಡಯಾಲಿಸಿಸ್ ಮಾಡಿಸಬೇಕಾಗಿದ್ದದರಿಂದ ಹೆಂಡತಿ ಸರಿಯಾಗಿ ಆರೈಕೆ ಮಾಡುತ್ತಿರಲಿಲ್ಲ. ಡಯಾಲಿಸಿಸ್ನಿಂದ ನಾನು ಬೇಗ ಸಾವನ್ನಪ್ಪುತ್ತೇನೆ. ಆದ್ರೆ ನನಗಿಂತ ಮೊದಲು ಹೆಂಡತಿ ಸಾಯಬೇಕೆಂದು ಆಕೆ ಮಲಗಿದ್ದ ವೇಳೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಘಟನಾ ಸ್ಥಳಕ್ಕೆ ತೆಕ್ಕಲಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
- Advertisement -