Sunday, May 5, 2024
spot_imgspot_img
spot_imgspot_img

ಪೋಷಕರನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದ ನೀರಜ್​ ಚೋಪ್ರಾ

- Advertisement -G L Acharya panikkar
- Advertisement -

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತದ ಮುಡಿಗೆ ಚಿನ್ನದ ಪದಕವನ್ನು ಅರ್ಪಿಸಿದ್ದ ನೀರಜ್​ ಚೋಪ್ರಾ ಇಂದು ತಮ್ಮ ಪುಟ್ಟ ಕನಸೊಂದನ್ನು ನನಸು ಮಾಡಿಕೊಂಡಿದ್ದಾರೆ.

ವಿಮಾನದಲ್ಲಿ ತನ್ನ ಪೋಷಕರನ್ನು ಕರೆದುಕೊಂಡು ಹೋಗಬೇಕೆಂಬ ಆಸೆಯನ್ನು ನೀರಜ್​ ಇಂದು ತೀರಿಸಿಕೊಂಡಿದ್ದಾರೆ. 23 ವರ್ಷದ ಜಾವೆಲಿನ್​ ಎಸೆತಗಾರ ನೀರಜ್​​ ಟ್ವಿಟರ್​ನಲ್ಲಿ ಈ ಹೃದಯಸ್ಪರ್ಶಿ ಫೋಟೋಗಳನ್ನು ಶೇರ್​ ಮಾಡಿದ್ದಾರೆ. ‌

ಪೋಷಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಬೇಕು ಎಂಬ ನನ್ನ ಸಣ್ಣ ಕನಸೊಂದು ಇಂದು ನನಸಾಗಿದೆ ಎಂದು ನೀರಜ್​​ ಈ ಫೋಟೋಗಳಿಗೆ ಶೀರ್ಷಿಕೆ ನೀಡಿದ್ದಾರೆ. ನೀರಜ್​ ಚೋಪ್ರಾ ಈ ಫೋಟೋಗಳನ್ನು ಪೋಸ್ಟ್​ ಮಾಡುತ್ತಿದ್ದಂತೆಯೇ ಕಮೆಂಟ್​ಗಳ ಸುರಿಮಳೆಯೇ ಹರಿದಿದೆ.

- Advertisement -

Related news

error: Content is protected !!