Friday, June 5, 2026
spot_imgspot_img
spot_imgspot_img

ನೀರ್ಕಜೆ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ, ನೀರ್ಕಜೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

- Advertisement -
- Advertisement -

ನೀರ್ಕಜೆ: ದ.ಕ.ಜಿ.ಪಂ.ಹಿ.ಪ್ರಾ ಶಾಲೆ, ನೀರ್ಕಜೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಡಿ.27 ರಂದು ನಡೆಯಿತು.

ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಕೇಪು ಗ್ರಾ.ಪಂಚಾಯತ್ ಅಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರವೀಣ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಪು ಗ್ರಾ.ಪಂ.ಉಪಾಧ್ಯಕ್ಷ ಹೇಮಾವತಿ ದೇವುಮೂಲೆ, ವಿಟ್ಲ ಜೇಸಿಸ್ ಸ್ಕೂಲ್ ಆಡಳಿತಾಧಿಕಾರಿ ರಾಧಕೃಷ್ಣ ಎರುಂಬು, ನಿವೃತ್ತ ಮುಖ್ಯ ಶಿಕ್ಷಕಿ ಜಯಂತಿ, ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಲಚಂದ್ರ ನಾಯಕ್ ಕಟ್ಟೆ, ಪ್ರಾ.ಶಾ.ಶಿಕ್ಷಕರ ಸಂಘ, ಬಂಟ್ವಾಳ ತಾ.ಪ್ರಧಾನ ಕಾರ್ಯದರ್ಶಿ ಯತೀಶ್ ಪಿ, ಭಾಗವಹಿಸಿದ್ದರು.

ಮುಖ್ಯಗುರು ಬಾಬು ನಾಯ್ಕ ಬಿ. ಶಾಲಾ ವರದಿ ವಾಚಿಸಿದರು. ಸಹಶಿಕ್ಷಕಿ ಉಷಾ ಬಿ. ಸ್ವಾಗತಿಸಿದರು. ಸಹಶಿಕ್ಷಕ ರಾಮನಾಯ್ಕ ವಂದಿಸಿದರು. ಸಹಶಿಕ್ಷಕಿ ಶೀಲಾವತಿ ಕೆ. ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ರವಿನಾಯ್ಕ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

- Advertisement -

Related news

error: Content is protected !!