Friday, May 3, 2024
spot_imgspot_img
spot_imgspot_img

ಸಿಎಂ ಹೇಳಿಕೆ ನೀಡುವುದನ್ನು ನಿಲ್ಲಿಸಿ- ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನೇಹಾ ತಂದೆ ನಿರಂಜನ್‌ ಎಚ್ಚರಿಕೆ

- Advertisement -G L Acharya panikkar
- Advertisement -

ಕಾಲೇಜು ಕ್ಯಾಂಪಸ್‌ನಲ್ಲಿ ಕಾರ್ಪೊರೇಟರ್ ಮಗಳ ಭೀಕರ ಹತ್ಯೆ ಪ್ರಕರಣವು ವೈಯಕ್ತಿಕ ಕಾರಣಕ್ಕೆ ಆಗಿರೋದು. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ನೇಹಾ ತಂದೆ ನಿರಂಜನ್‌ ರವರು ಮಾಧ್ಯಮದ ಜೊತೆ ಮಾತನಾಡಿದ್ದು,, ನಾನು ಕೈ ಮುಗಿದು ಕೇಳಿಕೊಳ್ತೀನಿ. ಸಿಎಂ ಹಾಗೂ ಗೃಹ ಸಚಿವರು ನನ್ನ ಮಗಳ ಹತ್ಯೆ ಪ್ರಕರಣ ಸಂಬಂಧ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಿ, ನನ್ನ ಮಗಳನ್ನು ಈಗಾಗಲೇ ಬಲಿ ತೆಗೆದುಕೊಂಡು ಆಗಿದೆ. ನಮ್ಮನ್ನಾದರು ಬದುಕಲು ಬಿಡಿ. ನೀವು ಇದೆ ರೀತಿಯ ಹೇಳಿಕೆ ಕೊಟ್ಟರೆ ನಾನು ಸಮಾಜದಲ್ಲಿ ಹೇಗೆ ಮುಖ ತೋರಿಸಲಿ. ನಾನು ನನ್ನ ಕುಟುಂಬ‌ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ನಿರಂಜನ್‌ ಎಚ್ಚರಿಕೆ ನೀಡಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಮಗಳ ಸಾವು ವೈಯಕ್ತಿಕ ಅಲ್ಲ. ಅವರಿಗೆ ಮಾಹಿತಿಯ ಕೊರತೆ ಇದೆ. ಯಾರೋ ಅವರನ್ನು ತುಷ್ಠೀಕರಣ ಮಾಡಿ ಹೇಳುವಾಗೆ ಮಾಡಿದ್ದಾರೆ. ದಯಮಾಡಿ ಅಂತಹ ಹೇಳಿಕೆಗಳನ್ನು ಕೊಡಬೇಡಿ. ವೈಯಕ್ತಿಕ ಅಂದ್ರೆ ನಾವೇನು ಯಾರಾದ್ದಾದರು ಜೊತೆ ಸಂಬಂಧ ಬೆಳೆಸಲು ಹೋಗಿದ್ದೇವಾ..?. ಅಥವಾ ವ್ಯಾಪಾರ ಇತ್ತಾ?. ವೈಯಕ್ತಿಕ ಅನ್ನುವುದಾದರೆ ಯಾವುದಾದರೂ ಸಂಬಂಧ ಇರಬೇಕು ಅಲ್ವಾ. ಈ ರೀತಿಯ ಹೇಳಿಕೆಗಳಿಂದ ನನ್ನ ಮಗಳಿಗೆ ನ್ಯಾಯ ಸಿಗಲ್ಲ ಎಂದು ನೇಹಾ ತಂದೆ ನಿರಂಜನ್‌ ಬೇಸರ ವ್ಯಕ್ತಪಡಿಸಿದರು.

ನಮ್ಮ ಹಾಗೂ ಅವರ ಮಧ್ಯೆ ಯಾವುದೇ ರೀತಿಯ ಸಂಬಂಧ ಇರಲಿಲ್ಲ. ಅವರು ನಮ್ಮ ಅಕ್ಕಪಕ್ಕದ ಮನೆಯವರಲ್ಲ.. ನಮ್ಮ ಓಣಿಯವರಲ್ಲ ಅಥವಾ ನಮ್ಮ ಕ್ಲಾಸ್‌ಮೇಟ್‌ ಕೂಡ ಅಲ್ಲ. ವೈಯಕ್ತಿಕ ಅಂದಿದ್ರೆ ಆಕೆ ಅವನ ಜೊತೆ ಹೋಗುತ್ತಿದ್ದಳು ಎಂದು ವಾಗ್ದಾಳಿ ನಡೆಸಿದರು.

ಎರಡು ವರ್ಷದ ಹಿಂದೆ ಆತ ಕಾಲೇಜು ಬಿಟ್ಟಿದ್ದಾನೆ. ಅವನು ಆಕೆಯ ಮೇಲೆ ಕಣ್ಣಿಟ್ಟು, ಲವ್‌ ಜಿಹಾದ್‌ ಟ್ರೈನಿಂಗ್‌ ತೆಗೆದುಕೊಂಡು ಬಂದು ಆಕೆಯನ್ನು ಟಾರ್ಗೆಟ್‌ ಮಾಡಿದ್ದಾನೆ. ಒಳ್ಳೆಯ ಸಂಸ್ಕೃತಿ ಇರುವ ಹುಡುಗಿಯನ್ನು ಬಲೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದಾನೆ. ಆದರೆ ಆಕೆ ನಿರಾಕರಿಸಿದ್ದಕ್ಕೆ ಕೊಲೆ ಮಾಡಿದ್ದಾನೆ ಎಂದರು.

- Advertisement -

Related news

error: Content is protected !!