Saturday, September 5, 2026
spot_imgspot_img
spot_imgspot_img

ದಿ.ಪ್ರವೀಣ್ ನೆಟ್ಟಾರ್ ಸ್ಮರಣಾರ್ಥ ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ ಸಹಕಾರದಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ನೆಟ್ಟಾರು-ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

- Advertisement -
- Advertisement -

ನೆಟ್ಟಾರು: ದಿ.ಪ್ರವೀಣ್ ನೆಟ್ಟಾರ್ ಸ್ಮರಣಾರ್ಥವಾಗಿ ಎಸ್.ಎಲ್.ವಿ ಬುಕ್ಸ್ ಇಂಡಿಯಾ ಪ್ರೈ.ಲಿ ಸಹಕಾರದಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ನೆಟ್ಟಾರು ಶಾಲಾ ಮಕ್ಕಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ಜೂನ್ 5 ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ವಸಂತ ಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಆರ್.ಕೆ ಭಟ್ ಕುರುಂಬುಡೇಲು ಆಗಮಿಸಿ, ಮಕ್ಕಳಿಗೆ ಶಿಕ್ಷಣದ ಮಹತ್ವವನ್ನು ತಿಳಿಸಿದರು.

ಶಾಲಾ ಮುಖ್ಯಗುರುಗಳು ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ಅರುಣ್ ಶಂಕರ ನೆಟ್ಟಾರು, ಶ್ರೀ ಶೀನಪ್ಪ ಪೂಜಾರಿ ಕುತ್ಯಾಡಿ, ಶ್ರೀ ಶೇಖರ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ನೂತನ , ಪ್ರವೀಣ್ ಧನ್ಯವಾದ ಸಲ್ಲಿಸಿದರು. ಶೈಲೇಶ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!