Wednesday, July 22, 2026
spot_imgspot_img
spot_imgspot_img

ವಿಟ್ಲ ತಾಲೂಕು ಹೋರಾಟಕ್ಕೆ ನೂತನ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ಬಿ.ಕೆ. ಬಶೀರ್, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ ಆಯ್ಕೆ

ವಿಟ್ಲ ತಾಲೂಕು ರಚನೆ ಮತ್ತು ವಿಟ್ಲ ವಿಧಾನ ಸಭಾ ಕ್ಷೇತ್ರದ ಮರುಸ್ಥಾಪನೆಗೆ ಒತ್ತಾಯಿಸಿ ವಿಟ್ಲದಲ್ಲಿ‌ ಮೇ 23ರಂದು ಸಭೆ ನಡೆಸಿ ನೂತನ ಸಮಿತಿ ರಚಿಸಲಾಯಿತು‌.

ಸಭೆಯಲ್ಲಿ ಉಪಸ್ಥಿತರಿದ್ದ ಮುರುವ ನಡುಮನೆ ಮಹಾಬಲ ಭಟ್, ಬಿ. ಕೆ. ಬಶೀರ್, ಕಾನ ಈಶ್ವರ ಭಟ್ , ಅಬ್ದುಲ್ ರಹಿಮಾನ್ ನೆಲ್ಲಿಗುಡ್ಡೆ, ರಾಮಣ್ಣ ಪಾಲಿಗೆ,ರಮಾನಾಥ ವಿಟ್ಲ, ಜಯರಾಮ ಬಳ್ಳಾಲ್, ಹಸೈನಾರ್ ಕಡಂಬು ಮೊದಲಾದವರು ಸಲಹೆ ಸೂಚನೆಗಳನ್ನು ಮುಂದಿಟ್ಟರು.

ಉದ್ದೇಶಿತ ವಿಟ್ಲ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಸಭೆ ನಡೆಸಿ ಅಲ್ಲಿನ ಸದಸ್ಯರನ್ಬು ಸೇರಿಸಿಕೊಳ್ಳುವುದು. ವ್ಯಾಪ್ತಿಯ ಶಾಸಕರಿಗೆ ,ಸಭಾಪತಿಗಳಿಗೆ ಮನವಿ ಮಾಡುವುದು . ವಿಟ್ಲದಲ್ಲಿ‌ ಸಭೆ ನಡೆಸುವುದು ಇತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ನೂತನ ಸಮಿತಿ ಗೌರವಾಧ್ಯಕ್ಷ ರಾಗಿ ಬಂಗಾರು ಅರಸರು, ಮಹಾಬಲ ಭಟ್

ವಿಟ್ಲ ತಾಲೂಕು ರಚನೆ ಮತ್ತು ವಿಧಾನ ಸಭೆ ಕ್ಷೇತ್ರ ಮರುಸ್ಥಾಪನೆ ಆಗ್ರಹ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ವಿಟ್ಲ ಅರಮನೆಯ ಬಂಗಾರು ಅರಸರು ಮತ್ತು ಹಿರಿಯ ಹೋರಾಟಗಾರ ಮುರುವ ನಡುಮನೆ ಮಹಾಬಲ ಭಟ್ ಅವರನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ಬಿ. ಕೆ. ಬಶೀರ್, ಸಂಚಾಲಕರಾಗಿ ರಾಮಣ್ಣ, ಉಪಾಧ್ಯಕ್ಷರಾಗಿ ಹಸೈನಾರ್ ಕಡಂಬು, ಸುದರ್ಶನ ಪಡಿಯಾರ್, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ ವಿಟ್ಲ, ಕಾರ್ಯದರ್ಶಿಯಾಗಿ ಕಾನ ಈಶ್ವರ ಭಟ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ರಹಮಾನ್ , ಜತೆ ಕಾರ್ಯ ದರ್ಶಿಯಾಗಿ ಸದಾನಂದ ಗೌಡ ಸೇರಾಜೆ ಅವರನ್ನು ಆರಿಸಲಾಯಿತು.ಸದಸ್ಯರಾಗಿ ಜಾನ್ ಡಿಸೋಜಾ ,ಅಶ್ವಿನಿ ಪೆರುವಾಯಿ , ಪ್ರೇಮಲತಾ ಆಯ್ಕೆಯಾದರು. ಗ್ರಾಮ ಭೇಟಿ ಸಂದರ್ಭದಲ್ಲಿ ಸಮಿತಿಗೆ ಸದಸ್ಯರನ್ನು ಸೇರಿಸಿ ವಿಸ್ತರಿಸಲು ನಿರ್ಧರಿಸಲಾಯಿತು.

- Advertisement -

Related news

error: Content is protected !!