Saturday, June 28, 2025
spot_imgspot_img
spot_imgspot_img

ನವದೆಹಲಿ: ದೇಶದಲ್ಲಿ ರಸ್ತೆ ಅಪಘಾತದಿಂದ ಸಾವು: ಉತ್ತರ ಪ್ರದೇಶ ಪ್ರಥಮ, ಕರ್ನಾಟಕ 5 ನೇಸ್ಥಾನ

- Advertisement -
- Advertisement -

ನವದೆಹಲಿ : 2023ರಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಸಾವು ಪ್ರಮಾಣದಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 5ನೇ ಸ್ಥಾನ ಲಭಿಸಿದೆ. 12,321 ಸಾವುಗಳು ಕರ್ನಾಟಕದಲ್ಲಿ ಕಳೆದ ವರ್ಷ ಸಂಭವಿಸಿವೆ. ಇನ್ನು ದೇಶದಲ್ಲಿ 1.73 ಲಕ್ಷ ಜನ ಸಾವನ್ನಪ್ಪಿದ್ದಾರೆ. ಅಂದರೆ ದಿನವೊಂದಕ್ಕೆ ಸರಾಸರಿ 474 ಜನ ಹಾಗೂ 3 ನಿಮಿಷಕ್ಕೆ ಒಂದು ಜೀವ ಬಲಿಯಾದಂತಾಗಿದೆ.

ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅಂಕಿ-ಅಂಶ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಉತ್ತರ ಪ್ರದೇಶ (23,652 ಸಾವುಗಳು) ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು (18,347 ಸಾವು), ಮಹಾರಾಷ್ಟ್ರ (15,366 ಸಾವು), ಮಧ್ಯಪ್ರದೇಶ (13,798 ಸಾವು), ಕರ್ನಾಟಕ (12,321 ಸಾವು) ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿವೆ.

- Advertisement -

Related news

error: Content is protected !!