Thursday, May 16, 2024
spot_imgspot_img
spot_imgspot_img

ಭಾರತಕ್ಕೆ ತೆರಳುವ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ ಅಮೆರಿಕಾ!

- Advertisement -G L Acharya panikkar
- Advertisement -

ನವದೆಹಲಿ: ಭಾರತದಲ್ಲಿ ಕೊರೊನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತನ್ನ ನಾಗರಿಕರಿಗೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಿದೆ.

ಸಿಡಿಸಿ ತನ್ನ ಸಲಹೆಯಲ್ಲಿ, ”ಭಾರತದಲ್ಲಿ ಕೋವಿಡ್-19 ಹೆಚ್ಚಾಗಿ ಹರಡುತ್ತಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿಯ ಕಾರಣದಿಂದಾಗಿ ಸಂಪೂರ್ಣವಾಗಿ ಲಸಿಕೆ ಹಾಕಿದ ಪ್ರಯಾಣಿಕರು ಸಹ ಕೋವಿಡ್-19 ರೂಪಾಂತರ ಸೋಂಕು ತಗಲುವ ಅಪಾಯವನ್ನು ಹೊಂದಬಹುದು ಮತ್ತು ಭಾರತಕ್ಕೆ ತೆರಳುವ ಎಲ್ಲಾ ಪ್ರಯಾಣವನ್ನು ತಪ್ಪಿಸಬೇಕೆಂದು’ ಹೇಳಿದೆ.

ನೀವು ಭಾರತಕ್ಕೆ ಪ್ರಯಾಣಿಸಬೇಕೆಂದಾದರೆ, ‘ಪ್ರಯಾಣಕ್ಕೂ ಮುನ್ನ ಮೊದಲು ಸಂಪೂರ್ಣವಾದ ಲಸಿಕೆ ಪಡೆಯಿರಿ. ಎಲ್ಲಾ ಪ್ರಯಾಣಿಕರು ಕಡ್ಡಾಯ ಮಾಸ್ಕ್ ಧರಿಸಬೇಕು, ಇತರರಿಂದ 6 ಅಡಿ ದೂರವಿರಬೇಕು, ಜನಸಂದಣಿಯನ್ನು ತಪ್ಪಿಸಬೇಕು ಮತ್ತು ಸ್ವಚ್ಛವಾಗಿ ಕೈ ತೊಳೆಯಬೇಕು’ ಎಂದು ಸಲಹೆ ನೀಡಿದೆ.

ಬ್ರಿಟನ್ ದೇಶವು ಭಾರತವನ್ನು ಸೋಮವಾರ ಕೆಂಪು ಪಟ್ಟಿಗೆ ಸೇರಿಸಿ ಘೋಷಿಸಲಾಗಿದೆ. ಯುಕೆ ಅಥವಾ ಐರಿಷ್ ಪ್ರಜೆಗಳನ್ನು ಹೊರತುಪಡಿಸಿ ಭಾರತದಿಂದ ಬರುವ ಎಲ್ಲರನ್ನು ನಿಷೇಧಿಸಿದೆ.

- Advertisement -

Related news

error: Content is protected !!