Thursday, June 24, 2021
spot_imgspot_img
spot_imgspot_img

ಸುಮಾರು 148 ವರ್ಷಗಳ ನಂತರ ಗೋಚರಿಸುತ್ತಿರುವ ಸೂರ್ಯಗ್ರಹಣ..!

- Advertisement -
- Advertisement -

ನವದೆಹಲಿ: ವರ್ಷದ ಮೊದಲ ಸೂರ್ಯಗ್ರಹಣ ಇಂದು ಸಂಭವಿಸಲಿದ್ದು ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 11.42 ನಿಮಿಷದಿಂದ ಆರಂಭವಾದ ಸೂರ್ಯಗ್ರಹಣ ಸಂಜೆ 6.41ಕ್ಕೆ ಸಮಾಪ್ತಿಯಾಗಲಿದೆ. ಸುಮಾರು 148 ವರ್ಷಗಳ ನಂತರ ಸೂರ್ಯ ಗ್ರಹಣ ಶನಿಜಯಂತಿಯ ದಿನದಂದೇ ಸಂಭವಿಸುತ್ತಿದೆ.

ಶನಿದೇವರ ಜನ್ಮದಿನದಂದೇ ಸೂರ್ಯ ಗ್ರಹಣ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸೂರ್ಯ ಮತ್ತು ಶನಿಯ ಅದ್ಬುತ ಸಂಯೋಜನೆಯನ್ನು ಕಾಣಬಹುದಾಗಿದೆ. ಚಂದ್ರ ಸೂರ್ಯನನ್ನು ಶೇ.97ರಷ್ಟು ಆವರಿಸಲಿದ್ದಾನೆ. ಈ ಬಾರಿ ಗ್ರಹಣ ವೃಷಭ ಹಾಗೂ ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ.

1873ರಲ್ಲಿ ಸೂರ್ಯಗ್ರಹಣ ಶನಿಜಯಂತಿಯ ದಿನದಂದು ಸಂಭವಿಸಿತ್ತು. ಸುಮಾರು 148 ವರ್ಷಗಳ ನಂತರ ಮತ್ತೆ ಶನಿಜಯಂತಿಯಂದೇ ಸೂರ್ಯಗ್ರಹಣ ಸಂಭವಿಸುತ್ತಿದೆ.

ಗುರುವಾರದಂದು ಸಂಭವಿಸುತ್ತಿರುವ ಸೂರ್ಯಗ್ರಹಣ ಅತ್ಯಂತ ಸುದೀರ್ಘ ಅವಧಿಯ ಸೂರ್ಯಗ್ರಹಣವಾಗಿದೆ. ಗ್ರಹಣ ಉತ್ತರ ಅಮೇರಿಕಾ, ಯುರೋಪ್ ಹಾಗೂ ಏಷ್ಯಾದ ಹಲವು ಭಾಗಗಳಲ್ಲಿ ಗೋಚರವಾಗಲಿದೆ. ಅದ್ರಲ್ಲೂ ಭಾರತದ ಅರುಣಾಚಲ ಪ್ರದೇಶ ಹಾಗೂ ಲಡಾಖ್ ಹೊರತು ಪಡಿಸಿದ್ರೆ ಉಳಿದೆಡೆಗಳಲ್ಲಿ ಗೋಚರವಾಗುವುದಿಲ್ಲ.

ಬೆಳಗ್ಗೆ 11.42ಕ್ಕೆ ಆರಂಭಗೊಳ್ಳುವ ಸೂರ್ಯಗ್ರಹಣ ಮಧ್ಯಾಹ್ನ 3.30ರ ಸುಮಾರಿಗೆ ಬೆಳಕಿನ ಉಂಗುರದಂತೆ ಗೋಚರವಾಗಲಿದೆ. ಸುಮಾರು ಒಂದೂವರೆ ಗಂಟೆಗಳ ಕಾಲ ಸೂರ್ಯನ ಸುತ್ತಲೂ ಬೆಂಕಿನ ಉಂಗುರ ವೀಕ್ಷಣೆ ಮಾಡಬಹುದಾಗಿದೆ ಎಂದು ಖಗೋಳ ಭೌತಶಾಸ್ತ್ರಜ್ಞರು ತಿಳಿಸಿದ್ದಾರೆ.

- Advertisement -
- Advertisement -

MOST POPULAR

HOT NEWS

Related news

error: Content is protected !!