Friday, April 26, 2024
spot_imgspot_img
spot_imgspot_img

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 40,134 ಹೊಸ ಕೊರೋನಾ ಪ್ರಕರಣ ದಾಖಲು!

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 40,134 ಹೊಸ ಕೊರೋನಾ ಸೋಂಕುಗಳು ದಾಖಲಾಗಿದ್ದು, ಕೊರೊನಾ ವೈರಸ್ ಪ್ರಕರಣಗಳ ಒಟ್ಟು ಸಂಖ್ಯೆ ಸೋಮವಾರ 3,16,95,958ಕ್ಕೆ ತಲುಪಿದೆ.

ಪ್ರಸ್ತುತ, 4,13,718 ಸಕ್ರಿಯ ಕೋವಿಡ್-19 ಪ್ರಕರಣಗಳು ಇವೆ. ಇದು ಒಟ್ಟು ಸೋಂಕುಗಳಲ್ಲಿ ಶೇಕಡಾ 1.3 ರಷ್ಟಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಇತ್ತೀಚಿನ ಬುಲೆಟಿನ್ ಪ್ರಕಾರ, 422 ಜನರು ವೈರಲ್ ಕಾಯಿಲೆಗೆ ಪ್ರಾಣ ಕಳೆದುಕೊಂಡಿದ್ದಾರೆ,ಆದರೆ ಕಳೆದ 24 ಗಂಟೆಗಳಲ್ಲಿ 36,946 ರೋಗಿಗಳು ಚೇತರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಲಾಡ್ಜ್ ನಲ್ಲಿ ಕೂಡಿ ಹಾಕಿ ಬಾಲಕನಿಗೆ ಲೈಂಗಿಕ ದೌರ್ಜನ್ಯ; ಮದರಸಾ ಶಿಕ್ಷಕನಿಗೆ 11 ವರ್ಷ ಜೈಲು ಶಿಕ್ಷೆ

ಇದು ಒಟ್ಟು ಸಾವಿನ ಸಂಖ್ಯೆಯನ್ನು 4,24,773 ಕ್ಕೆ ಮತ್ತುಇಲ್ಲಿವರೆಗೆ 3,08,57,467 ಜನ ಚೇತರಿಕೆ ಕಂಡಿದ್ದಾರೆ. ಸಾವಿನ ಪ್ರಮಾಣವು ಈಗ ಶೇಕಡಾ 1.34 ಮತ್ತು ಚೇತರಿಕೆ ದರ ಶೇಕಡಾ 97.36ರಷ್ಟಿದೆ.

- Advertisement -

Related news

error: Content is protected !!