Friday, April 19, 2024
spot_imgspot_img
spot_imgspot_img

ನಡುಮೊಗರು ಸ.ಹಿ.ಪ್ರಾ.ಶಾಲೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ!!

- Advertisement -G L Acharya panikkar
- Advertisement -


ಬಂಟ್ವಾಳ: ನಡುಮೊಗರು ಶಾಲೆಗೆ ಎಂಆರ್‌ಪಿಎಲ್ ಅನುದಾನದ ಸಹಕಾರದಲ್ಲಿ ಒಟ್ಟು ೪೨ ಲಕ್ಷ ರೂ. ವೆಚ್ಚದಲ್ಲಿ ನಾಲ್ಕು ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್   ನಾಯ್ಕ್ಉಳಿಪ್ಪಾಡಿಗುತ್ತು ಹೇಳಿದರು.ಅವರು ಸೋಮವಾರ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ನಡುಮೊಗರು ಸ.ಹಿ.ಪ್ರಾ.ಶಾಲೆಗೆ ನಿರ್ಮಾಣಗೊಳ್ಳಲಿರುವ ೪ ತರಗತಿ ಕೊಠಡಿ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.ಶಿಲಾನ್ಯಾಸವನ್ನು ಹಿರಿಯರಾದ ನಡುಮೊಗರುಗುತ್ತು ಶಿವರಾಮ ಶೆಟ್ಟಿ ನೆರವೇರಿಸಿದರು.


ಜಿ.ಪಂ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ರವೀಂದ್ರ ಕಂಬಳಿ, ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಭಾರ ಸಮನ್ವಯಾಽಕಾರಿ ರಾಘವೇಂದ್ರ ಬಲ್ಲಾಳ್, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಡುಮೊಗರುಗುತ್ತು ಶಿವರಾಮ ಶೆಟ್ಟಿ ಕೆ.ಎನ್., ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಚಿದಾನಂದ ರೈ, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್‌ಗುತ್ತು, ಬೊಳ್ಳುಕಲ್ಲು ನಾರಾಯಣ ಪೂಜಾರಿ, ಆದಂ ಕುಂಞಿ, ಮುಖ್ಯ ಶಿಕ್ಷಕ ಚಂದ್ರ.ಕೆ., ಸಾಯಿ ಗಿರಿಧರ್ ಶೆಟ್ಟಿ, ಧನಂಜಯ ಶೆಟ್ಟಿ ಎನ್., ಶಾಂತಪ್ಪ ಪೂಜಾರಿ ಹಟದಡ್ಕ, ಶಾಲಾ ಶಿಕ್ಷಕ ವೃಂದ, ಹಳೆವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಸದಸ್ಯರು,  ಮತ್ತಿತರರು ಉಪಸ್ಥಿತರಿದ್ದರು.
 ಶಿಕ್ಷಕ ಮಧುಸೂದನ್ ಸ್ವಾಗತಿಸಿದರು. ಶಿಕ್ಷಕ ಸಂದೇಶ್ ಕಾರ್ಯಕ್ರಮ ನಿರೂಪಿಸಿದರು.

ರೂ. 42 ಲಕ್ಷ ಅನುದಾನದಲ್ಲಿ ಮಣಿನಾಲ್ಕೂರು ಗ್ರಾಮದ ನಡುಮೊಗರು ಸರಕಾರಿ ಶಾಲೆಯ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆರೂ 3 ಕೋಟಿ ಅನುದಾನದಲ್ಲಿ ಉಳಿ ಗ್ರಾಮದ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ

Posted by Rajesh Naik U on Monday, 12 October 2020

- Advertisement -

Related news

error: Content is protected !!