- Advertisement -
- Advertisement -

ಗೋವಾ: ನೈಟ್‌ಕ್ಲಬ್ ಅಗ್ನಿ ದುರಂತ ಸಂಭವಿಸಿದ ಬೆನ್ನಲ್ಲೇ ಬೆಂಕಿ ಅಪಘಾತ ತಡೆ ನಿಯಮಗಳನ್ನು ಅನುಸರಿಸದ ಗೋವಾದ ಪ್ರವಾಸಿ ಕಟ್ಟಡಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದೆಂದು ರಾಜ್ಯದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಬುಧವಾರ ಹೇಳಿದ್ದಾರೆ.

ಸರಕಾರವು ನೇಮಿಸಿರುವ ಬೆಂಕಿ ಸುರಕ್ಷತೆ ಪರಿಶೋಧನಾ ಸಮಿತಿಯು ರಾಜ್ಯದ ಪ್ರವಾಸಿ ಕಟ್ಟಡಗಳಿಗೆ ಭೇಟಿ ನೀಡಲು ಆರಂಭಿಸಿದ್ದು, ತಪಾಸಣೆಗಳನ್ನು ಮುಗಿಸಿದ ಬಳಿಕ ವರದಿ ಸಲ್ಲಿಸಲಿದೆ ಎಂದು ಸಾವಂತ್ ಹೇಳಿದರು.

“ಯಾವುದೇ ಕಟ್ಟಡವು ಬೆಂಕಿ ಸುರಕ್ಷತಾ ನಿಯಮಗಳನ್ನು ಅನುಸರಿಸದಿರುವುದು ಸಮಿತಿಯ ಗಮನಕ್ಕೆ ಬಂದರೆ, ಅವುಗಳ ಪರವಾನಿಗೆಗಳನ್ನು ರದ್ದುಪಡಿಸಲಾಗುವುದು ಮತ್ತು ಅವುಗಳ ಕಟ್ಟಡಗಳಿಗೆ ಬೀಗ ಹಾಕಲಾಗುವುದು ಎಂದು ಅವರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.



- Advertisement -








