Monday, April 29, 2024
spot_imgspot_img
spot_imgspot_img

ಫೋಟೋ ಹಿಡಿದು ರಸ್ತೆಯಲ್ಲಿ ಧರಣಿ ಕುಳಿತ ಪೇದೆ.!

- Advertisement -G L Acharya panikkar
- Advertisement -

ಸಕಲೇಶಪುರ: ನೋ ಪಾರ್ಕಿಂಗ್ ಸ್ಥಳದಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಕಾರು ನಿಲ್ಲಿಸಿದ ಹಿನ್ನೆಲೆ ತಹಶೀಲ್ದಾರ್ ಅವರು ಕಾರಿನ ಚಕ್ರಗಳ ಗಾಳಿ ತೆಗೆದರು. ಆದ್ರೆ ತಹಶೀಲ್ದಾರ್ ಕ್ರಮವನ್ನು ಪೇದೆ ಖಂಡಿಸಿ, ಪ್ರತಿಭಟಿಸಿದ ಘಟನೆ ನಗರದಲ್ಲಿ ನಡೆದಿದೆ.

ಗ್ರಾಮಾಂತರ  ಠಾಣೆಯ ದಯಾನಂದ್ ಪ್ರತಿಭಟಿಸಿದ ಕಾನ್​ಸ್ಟೇಬಲ್​. ಜನನಿಬಿಡ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಮೆಡಿಕಲ್‌ ಶಾಪ್​ವೊಂದರ ಮುಂದೆ ಪೇದೆ ದಯಾನಂದ್ ತಮ್ಮ ಕಾರು ನಿಲ್ಲಿಸಿ ಔಷಧಿ ತರಲು ಮೆಡಿಕಲ್ ಶಾಪ್​ ಒಳಗೆ ಹೋಗಿದ್ದರು. ಈ ವೇಳೆ ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲುಗಡೆಯಾಗಿರುವುದನ್ನು ಕಂಡ ತಹಶೀಲ್ದಾರ್ ಮಂಜುನಾಥ್, ತಮ್ಮ ಕಾರು ಚಾಲಕನಿಗೆ ಕಾನ್​ಸ್ಟೇಬಲ್​ ಕಾರಿನ ಚಕ್ರದ ಗಾಳಿ ಬಿಡಲು ಸೂಚಿಸಿದ್ದಾರೆ.

ಕಾರಿನ ಚಕ್ರದ ಗಾಳಿ ಬಿಡುವಾಗ ಪೇದೆ ಹೊರ ಬಂದು, ತಹಶೀಲ್ದಾರ್ ಮಂಜುನಾಥ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ನಂತರ ಸ್ಥಳದಿಂದ ತಹಶೀಲ್ದಾರ್ ಬೇರೆಡೆಗೆ ತೆರಳಿದ್ದಾರೆ. ಆದ್ರೆ ಪೇದೆ ದಯಾನಂದ್ ಅವರು ಮಹಾತ್ಮ ಗಾಂಧಿ ಫೋಟೋ ಹಿಡಿದುಕೊಂಡು ಕಾರಿನ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು.

ಬಳಿಕ ನಗರ ಠಾಣೆ ಪಿಎಸ್‌ಐ ರಾಘವೇಂದ್ರ ಹಾಗೂ ಗ್ರಾಮಾಂತರ ಠಾಣೆಯ ಪಿಎಸ್‌ಐ ಚಂದ್ರಶೇಖರ್ ಬಂದು ಇತರ ಪೋಲಿಸರ ಸಹಾಯದಿಂದ ಕಾನ್​ಸ್ಟೇಬಲ್​ರನ್ನು​ ನಗರ ಠಾಣೆಗೆ ಕರೆದೊಯ್ದರು. ಕಾರನ್ನು ಪಿಕ್‌ಅಪ್ ವಾಹನದ ಮೂಲಕ ತೆಗೆದುಕೊಂಡು ಹೋಗಲಾಯಿತು.

- Advertisement -

Related news

error: Content is protected !!