Friday, May 10, 2024
spot_imgspot_img
spot_imgspot_img

ಸರ್ಕಾರಿ ಕಛೇರಿಗಳಲ್ಲಿ ಫೊಟೋ ವಿಡಿಯೋ ತೆಗೆಯುವಂತಿಲ್ಲ – ಹೊಸ ಆದೇಶ ಹೊರಡಿಸಿದ ಸರ್ಕಾರ

- Advertisement -G L Acharya panikkar
- Advertisement -

ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಪ್ಪಿತಪ್ಪಿಯೂ ವಿಡಿಯೋ ಚಿತ್ರೀಕರಣ ಇಲ್ಲವೇ ಫೋಟೋ ತೆಗೆಯುವಂತಿಲ್ಲ. ಶುಕ್ರವಾರ ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ಅವರು ಸುತ್ತೋಲೆ ಹೊರಡಿಸಿದ್ದು, ಸರ್ಕಾರದ ವ್ಯಾಪ್ತಿಗೆ ಒಳಪಡುವ ಕಚೇರಿ ಸಮಯದಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ತೆಗೆಯುವುದು ಇಲ್ಲವೆ ವಿಡಿಯೋ ಚಿತ್ರೀಕರಣ ಮಾಡದಂತೆ ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದಾರೆ.

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಬಂದಾಗ ಫೋಟೋ ತೆಗೆಯುವುದು ಇಲ್ಲವೇ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಇದು ದುರುಪಯೋಗವಾಗಿರುವುದರಿಂದ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರ ನೆಪದಲ್ಲಿ ಬರುವ ಖಾಸಗಿ ವ್ಯಕ್ತಿಗಳು ಯಾರೊಬ್ಬರ ಅನುಮತಿ ಪಡೆಯದೇ ಈ ರೀತಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಶೇಷವಾಗಿ ಮಹಿಳಾ ನೌಕರರಿಗೆ ಇದರಿಂದ ಸಮಸ್ಯೆ ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

‘ಸಾರ್ವಜನಿಕರು ಸರ್ಕಾರಿ ಕಚೇರಿಗಳನ್ನು ಪ್ರವೇಶಿಸಿ ಅನಧಿಕೃತವಾಗಿ ಫೋಟೊ ತೆಗೆದು, ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಿ ನೌಕರರ ಕರ್ತವ್ಯ ನಿರ್ವಹಣೆಗೆ ತೊಂದರೆ ಆಗುತ್ತಿದೆ. ಆದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತವಾಗಿ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧ ಮಾಡಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮನವಿ ಸಲ್ಲಿಸಿದ್ದರು.

sting operation

ನೌಕರರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಇನ್ನು ಮುಂದೆ ಅನುಮತಿ ಪಡೆಯದೆ ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ಹಾಗೂ ಫೋಟೊ ತೆಗೆಯುವುದಕ್ಕೆ ನಿರ್ಬಂಧ ಹಾಕಲಾಗಿದೆ. ನೌಕರರು ಕೂಡ ಈ ಬಗ್ಗೆ ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಎಲ್ಲದರ ಬಗ್ಗೆ ಚರ್ಚಿಸಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು ಅಧೀಕೃತ ಆದೇಶ ಹೊರಡಿಸಿದೆ.

ಇನ್ನು ಈ ಆದೇಶ ಹೊರ ಬರುತ್ತುದ್ದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಕೆಲ ಅಧಿಕಾರಿಗಳು ಮಾಡುವ ಖತರ್ನಾಕ್ ಕೆಲಸವನ್ನು ಸಾರ್ವಜನಿಕರು ಚಿತ್ರೀಕರಿಸಿ ಬಟಾಬಯಲು ಮಾಡಿದ್ದರು. ಸರ್ಕಾರಿ ಕಛೇರಿಗಳಲ್ಲಿ ನಡೆಯುವ ಅಕ್ರಮಕ್ಕೆ ಬ್ರೇಕ್ ಹಾಕಲು ಮತ್ತು ಸಾಕ್ಷ್ಯ ಸಮೇತ ಭ್ರಷ್ಟ, ಕಾಮುಕ ಅಧಿಕಾರಿಗಳನ್ನು ರೆಡ್ ಹ್ಯಾಂಡ್‌ ಆಗಿ ಹಿಡಿಯಲು ಸ್ಟಿಂಗ್ ಆಪರೇಶನ್ ಮತ್ತು ಮೊಬೈಲ್ ಮೂಲಕ ಚಿತ್ರೀಕರಿಸಿ ತಕ್ಕ ಶಾಸ್ತಿ ಮಾಡಿದ್ದು ಗಮನಾರ್ಹ. ಇನ್ನು ಈ ರೀತಿಯ ಆದೇಶದಿಂದ ಕೆಲ ಅಧಿಕಾರಿಗಳು ಬೇಕಾಬಿಟ್ಟಿ ಇದ್ದು ರಾಜಾರೋಷವಾಗಿ ತಮ್ಮ ಖತರ್ನಾಕ್ ಬುದ್ಧಿಯನ್ನು ತೋರಿಸುತ್ತಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಅಂತೆಯೇ ಅನುಮತಿ ದೊರೆತು ಚಿತ್ರೀಕರಣ ಮಾಡುವಾಗ ಅವ್ಯವಹಾರ ನಡೆದೇ ಹೋಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!