- Advertisement -
- Advertisement -
ಉಡುಪಿ: ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದು ಲಕ್ಷಾಂತರ ರೂ.ಗಳನ್ನು ವಸೂಲು ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ವಂಚನೆ ಮಾಡಿದ ಯುವತಿ ಸಾಚಿ ಜೈನ್, ಹಾಗೂ ವಂಚನೆಗೊಳಗಾದ ವ್ಯಕ್ತಿ ಸಂತೆಕಟ್ಟೆಯ ಅಸ್ಟರ್ (28) ಎಂದು ಗುರುತಿಸಲಾಗದೆ.
ಸಂತೆಕಟ್ಟೆಯ ಅಸ್ಟರ್ ಅವರಿಗೆ ಡೇಟಿಂಗ್ ಆ್ಯಪ್ನಲ್ಲಿ ಸಾಚಿ ಜೈನ್ ಎಂಬಾಕೆ ಪರಿಚಯವಾಗಿದ್ದಾಳೆ. ಬಳಿಕ ಆಕೆ ವಾಟ್ಸಾಪ್ನಲ್ಲಿ ಅಸ್ಟರ್ ಅವರೊಂದಿಗೆ ಚಾಟಿಂಗ್ ಮತ್ತು ವಿಡಿಯೋ ಕರೆ ಮಾಡುತ್ತಿದ್ದಳು. ಆಕೆ ತಾನು ಕರೆ ಮಾಡಿದ್ದನ್ನು ರೆಕಾರ್ಡ್ ಮಾಡುತ್ತಿದ್ದಳು.
ಕೆಲ ದಿನಗಳ ಬಳಿಕ ಆಕೆ ಅಸ್ಟರ್ ಅವರಿಗೆ ರೆಕಾರ್ಡ್ ಕಳುಹಿಸಿ ಹಣ ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾಳೆ. ಅದರಂತೆ ಅಸ್ಟರ್ ಅವರು ಆಕೆ ತಿಳಿಸಿದ ಬ್ಯಾಂಕ್ ಖಾತೆಗೆ ಹಾಗೂ ಯುಪಿಐ ಐಡಿ ಗಳಿಗೆ ಹಂತ ಹಂತವಾಗಿ 11,30,106ರೂ. ಪಾವತಿಸಿದ್ದಾರೆ. ಈ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -