ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟಿಗೆ ಸುದ್ದಿ ಮಾಡಿದ್ದ ನೋಕಿಯಾ ಕಂಪನಿ ಇದೀಗ ತನ್ನ ಬ್ರಾಂಡ್ ಲೋಗೋಗೆ ಹೊಸ ರೂಪ ನೀಡಿದೆ. 60 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹದೊಂದು ಬದಲಾವಣೆ ನೀಡಿದೆ. 60 ವರ್ಷಗಳಲ್ಲಿ ಮೊದಲ ಬಾರಿಗೆ ಇಂತಹದೊಂದು ನಿರ್ಣಯ ತೆಗೆದುಕೊಂಡಿದೆ.
ವಿಭಿನ್ನ ಲೋಗೋ ವಿನ್ಯಾಸಗೊಳಿಸಿದೆ. ನೋಕಿಯಾ ಐದು ಅಕ್ಷರದ ಭಿನ್ನ ರೀತಿಯಲ್ಲಿ ವಿನ್ಯಾಸಗೊಳಿಸಿದೆ. ಸದ್ಯ ನೀಲಿ ಬಣ್ಣದಲ್ಲಿ ಪರಿಚಯಿಸಿದೆ. ಸೋಮವಾರದಿದ ಗುರುವಾರದ ತನಕ ಮೊಬೈಲ್ ವಲ್ಡ್ ಕಾಂಗ್ರೆಸ್ ನಡೆಯಲಿದ್ದು, ಅದಕ್ಕೂ ಮೊದಲೇ ಕಂಪನಿ ಲೋಗೋ ಬದಲಾಯಿಸುವ ಮೂಲಕ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ನೆಡಸಲಿದೆ.
ಒಂದು ಕಾಲದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಮೊಬೈಲ್ ಫೋನ್‌ಗಳು ಬೇಡಿಕೆ ಜೋರಾಗಿತ್ತು. ಅದರಲ್ಲೂ ಕೀಪ್ಯಾಡ್ ಫೋನ್‌ಗಳಿಂದ ಹಿಡಿದು ಮೈಕ್ರೋಸಾಫ್ಟ್ ಫೋನ್‌ಗಳವರೆಗೂ ಮಾರುಕಟ್ಟೆಯಲ್ಲಿ ಚೆನ್ನಾಗಿ ಖ್ಯಾತಿ ಆಗಿದೆ. ಆದರೆ ಚೀನಾ ಫೋನ್‌ಗಳ ಆಗಮನ ಮತ್ತು ಕೊರಿಯಾ ಮೂಲದ ಫೋನ್‌ಗಳ ಪರಿಣಾಮದಿಂದ ಮಾರುಕಟ್ಟೆ ನೆಲಕಚ್ಚಿತು. ಮತ್ತೆ ಕೀಪ್ಯಾಡ್ ಮತ್ತು ಇನ್ನಿತರ ಸಾಧನಗಳ ಮೂಲಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿದೆ.