Monday, June 22, 2026
spot_imgspot_img
spot_imgspot_img

ವಿಟ್ಲ: ಕೇಬಲ್ ಕದ್ದು ಸಾರ್ವಜನಿಕರ ಕೈಗೆ ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಕುಖ್ಯಾತ ಕಳ್ಳರು.

- Advertisement -
- Advertisement -

ವಿಟ್ಲ: ಪ್ರೊಫೆಸರ್ ಒಬ್ಬರ ಮನೆಯಿಂದ ಕೇಬಲ್ ಕಳ್ಳತನ ನಡೆಸಿ ಬರುತ್ತಿದ್ದಾಗ ರೆಡ್ ಹ್ಯಾಂಡಾಗಿ ನಟೋರಿಯಸ್ ಕಳ್ಳರಿಬ್ಬರು ಸ್ಥಳೀಯರ ಕೈಗೆ ಸಿಕ್ಕಿ ಬಿದ್ದ ಘಟನೆ ಸಾಲೆತ್ತೂರು ಸಮೀಪದ ಪುದ್ದೊಟ್ಟು ಎಂಬಲ್ಲಿ ನಡೆದಿದೆ.

ಸಾಲೆತ್ತೂರು ಕಟ್ಟೆ ಕಾಲೋನಿ ನಿವಾಸಿ ಉಸ್ಮಾನ್ ಯಾನೆ ಗುಜರಿ ಮೋನು(38) ಮತ್ತು ಮಂಚಿ ಕೋಕಳ ನಿವಾಸಿ ಪಿ.ಜಿ. ಅಬೂಬಕ್ಕರ್(30) ಸಿಕ್ಕಿಬಿದ್ದು ವಿಟ್ಲ ಪೊಲೀಸರ ವಶವಾದ ಕುಖ್ಯಾತ ಕಳ್ಳರು.

ಇವರಿಬ್ಬರೂ ಹಲವು ಸಮಯಗಳಿಂದ ಟೆಲಿಫೋನ್ ಕಂಬ, ದೂರವಾಣಿ ಕೇಬಲ್ ಮತ್ತು ವಿದ್ಯುತ್ ಚಾಲಿತ ಪಂಪುಗಳ ಕೇಬಲ್‌ಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ನಡೆಸುವ ನಟೋರಿಯಸ್ ಕಳ್ಳರು ಎಂದು ಸ್ಥಳೀಯರು ತಿಳಿಸಿದ್ದಾರೆ. ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಸುದ್ದಿ ಹಬ್ಬುತ್ತಿದ್ದಂತೆ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದು, ಖದೀಮರಿಗೆ ಮನಬಂದಂತೆ ಒದೆ ನೀಡಿದ ಬಳಿಕ ವಿಟ್ಲ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

- Advertisement -

Related news

error: Content is protected !!