Saturday, June 20, 2026
spot_imgspot_img
spot_imgspot_img

ವಿಟ್ಲ: ದಾಸ್ತಾನಿರಿಸಿದ್ದ ಅಡಿಕೆ ಮತ್ತು ಕಾಳುಮೆಣಸು ಕಳವು

- Advertisement -
- Advertisement -

ವಿಟ್ಲ: ಮನೆಯ ಸಮೀಪದ ಕೊಠಡಿಯಲ್ಲಿಟ್ಟಿದ್ದ ಅಡಿಕೆ ಮತ್ತು ಕರಿಮೆಣಸು ಕಳವಾದ ಘಟನೆ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ನಡೆದಿದೆ.

ಕುಡ್ತಮುಗೇರು ಕೆ. ಅಣ್ಣು ಸಪಲ್ಯ ಅವರು ಒಣಗಿಸಿ ಸುಲಿಯದ ಅಡಿಕೆ (ಅಂದಾಜು 150 ಕೆ.ಜಿ.) ಮತ್ತು 4 ಗೋಣಿಚೀಲದಲ್ಲಿ ಒಣಗಿದ ಕರಿಮೆಣಸು (ಅಂದಾಜು 30 ಕೆ.ಜಿ.)ಗಳನ್ನು ದಾಸ್ತಾನಿರಿಸಿದ್ದರು.

ಕೊಠಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ, ಅಡಿಕೆ ಮತ್ತು ಕಾಳುಮೆಣಸು ಕಳ್ಳತನ ಆಗಿರುವುದು ತಿಳಿಯಿತು. ಕಳ್ಳತನವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 57,000 ರೂ. ಆಗಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!