Wednesday, April 24, 2024
spot_imgspot_img
spot_imgspot_img

ಒಂದೇ ಕುಟುಂಬದ 6 ಮಂದಿ ನಿಗೂಢ ಸಾವು- ಬ್ಲಾಂಕೆಟ್ ಒಳಗೆ ಸಿಕ್ಕಿತು 6 ಶವಗಳು!!

- Advertisement -G L Acharya panikkar
- Advertisement -

ಒಡಿಶಾ(ನ.12): ಒಡಿಶಾದ ಬೊಲಾಂಗಿರ್ ಜಿಲ್ಲೆಯಲ್ಲಿ ಒಂದೇ ಕುಟುಂಬದ ಆರು ಮಂದಿ ನಿಗೂಢವಾಗಿ ಮೃತಪಟ್ಟಿದ್ದಾರೆ.ಶವಗಳನ್ನು ಬ್ಲಾಂಕೆಟ್‌ನಲ್ಲಿ ಸುತ್ತಿ ಇಡಲಾಗಿದೆ. ಬೊಲಾಂಗಿರ್ ಜಿಲ್ಲೆಯ ಪಟ್ನಾಗಡ ಪೊಲೀಸ್ ಠಾಣಾ ವ್ಯಾಪ್ತಿಯ ಸನ್ರಪದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.


ರಕ್ತಸಿಕ್ತ ಶವಗಳೂ ಮನೆಯ ನೆಲದ ಮೇಲೆ ಪತ್ತೆಯಾಗಿವೆ. ಮೃತರನ್ನು ಬುಲು ಜಾನಿ (50) ಅವರ ಪತ್ನಿ ಜ್ಯೋತಿ (48) ಹೆಣ್ಣುಮಕ್ಕಳಾದ ಸರಿತಾ ಮತ್ತು ಶ್ರೇಯಾ ಹಾಗೂ ಗಂಡುಮಕ್ಕಳಾದ ಭೀಷ್ಮ ಮತ್ತು ಸಂಜೀವ್ ಎಂದು ಗುರುತಿಸಲಾಗಿದೆ.

ಬುಲು ಜಾನಿ ಅವರ ಮನೆಯ ಬಾಗಿಲು ಬಹಳ ಸಮಯದಿಂದ ಮುಚ್ಚಿರುವುದನ್ನು ಕಂಡಿದ್ದ ನೆರೆಹೊರೆಯವರಿಂದ ಈ ಘಟನೆ ಬೆಳಕಿಗೆ ಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಬುಲು ಜಾನಿ ಮತ್ತು ಅವರ ಕುಟುಂಬ ಜೇನು ಸಂಗ್ರಹಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಹರಿತವಾದ ಆಯುಧಗಳಿಂದ ದೇಹಕ್ಕೆ ಗಾಯ ಮಾಡಿರುವುದು ಕಂಡುಬಂದಿದೆ ಎಂದು ಎಸ್‌ಪಿ ಸಂದೀಪ್ ಸಂಪತ್ ಹೇಳಿದ್ದಾರೆ.

- Advertisement -

Related news

error: Content is protected !!