Saturday, April 20, 2024
spot_imgspot_img
spot_imgspot_img

ಒಡಿಯೂರು ಸಂಸ್ಥಾನದ ವತಿಯಿಂದ ಒಂದು ನಿಮಿಷದ ಮುದ್ದುಕೃಷ್ಣ ವೇಷದ ವಿಡಿಯೋ ಸ್ಪರ್ಧೆ:

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಕೃಷ್ಣ ಸಂಸ್ಕೃತಿಯ ದ್ಯೋತಕ. ಸಂಸ್ಕೃತಿಯ ಬೆಳಕು ರಾಮ-ಕೃಷ್ಣರು. ಮಕ್ಕಳನ್ನು ಸಂಸ್ಕೃತಿಯ ಉಳಿವಿನ ಹರಿಕಾರರನ್ನಾಗಿ ಬೆಳೆಸಬೇಕು. ಆ ಮೂಲಕ ಭವ್ಯ ಭಾರತ ನಿರ್ಮಾಣದ ಭವಿಷ್ಯ ಬರೆಯುವಂತಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಈ ಬಾರಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ತಮ್ಮ ತಮ್ಮ ಮನೆಯಲ್ಲೇ ಆಚರಿಸಿ ಸಂಭ್ರಮಿಸಿಬೇಕೆಂದು ಗುರುದೇವಾನಂದ ಸ್ವಾಮಿಗಳವರ ಸಂದೇಶದಂತೆ ಒಂದು ನಿಮಿಷದ ಮುದ್ದುಕೃಷ್ಣ ವೇಷದ ವಿಡಿಯೋ ಕಳುಹಿಸುವ ಮೂಲಕ ನಾಲ್ಕು ವರ್ಷದೊಳಗಿನ ಪುಟ್ಟ ಮಕ್ಕಳಿಗೆ ಮುದ್ದು ಕೃಷ್ಣವೇಷ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.


ಸುಮಾರು ೧೫೦ ಪುಟಾಣಿಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಹೊರದೇಶದಿಂದಲೂ ಪಾಲ್ಗೊಂಡಿದ್ದರು. ಈ ಸ್ಪರ್ಧೆಯಲ್ಲಿ ಕಡಬ ತಾಲ್ಲೂಕಿನ ಶಿರಾಡಿಯ ಅದ್ವಿನ್ ಎಸ್. ಅವರು ಪ್ರಥಮ ಸ್ಥಾನ ಪಡೆದರು. ಅನ್ವಿಕಾ ಅನಿಲ್ ಪೈ, ಬಂಗಾಡಿಪೇಟೆ ದ್ವಿತೀಯ ಸ್ಥಾನ ಪಡೆದರು. ಅವರಿಗೆ ಚಿನ್ನದ ಪದಕ ಮತ್ತು ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹಕ ಬಹುಮಾನ ಪಡೆದ ಶ್ರೀಯಾ ಸನತ್ ಬೀರಿ, ಹನ್ಶ್‌ಕಿರಣ್ ಶೆಟ್ಟಿ ಕಡೆಶೀವಾಲಯ, ಚರಿತ್ ಆರ್.ಶೆಟ್ಟಿ, ವೇಣೂರು, ತೇಜಸ್ವಿ ನಾರಾಯಣ ಭಟ್ ಪೈವಳಿಕೆ, ಗಾನ್ವಿ ಎಸ್.ಶೆಟ್ಟಿ, ಖಂಡಿಗೆ, ವಿಭಾ ಎನ್. ನೆಟ್ಲ, ಯಜ್ವಯ್ ಜಿ.ಕುರಿಯ, ಪ್ರತ್ಯಯ್ ಆರ್.ಕುಲಾಲ್, ಅದ್ವಿತ್ ಶೆಟ್ಟಿ ಬಾಡೂರು, ಆದ್ಯಾ ಎಸ್.ಶೆಟ್ಟಿ ಕನ್ಯಾನ, ಅಹಾನ್ ಎಸ್.ಶೆಟ್ಟಿ, ಕಾರ್ಕಳ, ಕೆ.ಎಲ್.ಪ್ರಣಮ್ ರೈ, ರಾಮಕುಂಜ ಅವರಿಗೆ ರಜತ ಪದಕ, ಪ್ರಮಾಣ ಪತ್ರ, ಫಲ ಮಂತ್ರಾಕ್ಷತೆಗಳನ್ನಿತ್ತು ಒಡಿಯೂರು ಶ್ರೀ ಹರಸಿದರು.

- Advertisement -

Related news

error: Content is protected !!