Thursday, August 13, 2026
spot_imgspot_img
spot_imgspot_img

ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಸ್ಫೋಟ; 52 ಮಂದಿ ಸಾವು..!

- Advertisement -
- Advertisement -

ಲಾಗೋಸ್: ತೈಲ ಸಾಗಿಸುತ್ತಿದ್ದ ಟ್ಯಾಂಕರ್ ಪ್ರಯಾಣಿಕರು ಮತ್ತು ಜಾನುವಾರುಗಳಿದ್ದ ಟ್ರಕ್‍ಗೆ ಡಿಕ್ಕಿಯಾಗಿ ಸ್ಫೋಟಗೊಂಡು ಕನಿಷ್ಠ 52 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಅಧಿಕ ಜಾನುವಾರುಗಳು ಸಜೀವ ದಹನಗೊಂಡ ಘಟನೆ ನೈಜೀರಿಯಾದಲ್ಲಿ ನಡೆದಿದೆ.

ಉತ್ತರ ನೈಜೀರಿಯಾದ ನೈಜರ್ ರಾಜ್ಯದ ಅಗೈ ಪ್ರಾಂತದಲ್ಲಿ ಈ ಅನಾಹುತ ಸಂಭವಿಸಿದೆ. ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್ ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಡಿಕ್ಕಿಯಾಗಿದೆ. ಅದರ ಬಳಿಕ ವ್ಯಾನ್ ಹಾಗೂ ಕ್ರೇನ್ ಒಂದಕ್ಕೂ ಅದು ಡಿಕ್ಕಿ ಹೊಡೆದು ಸ್ಫೋಟಗೊಂಡಿದೆ. ಟ್ರಕ್‍ಗೂ ಬೆಂಕಿ ಹಿಡಿದಿದ್ದು ಕನಿಷ್ಠ 52 ಜನರು ಮತ್ತು 50ಕ್ಕೂ ಅಧಿಕ ಜಾನುವಾರುಗಳು ಜೀವಂತ ದಹನಗೊಂಡಿದ್ದಾರೆ ಎಂದು ರಕ್ಷಣಾ ಏಜೆನ್ಸಿಯ ಅಧಿಕಾರಿಗಳು ಹೇಳಿದ್ದಾರೆ.

ಸುಟ್ಟು ಕರಕಲಾದ ಮೃತದೇಹಗಳನ್ನು ಸಾಮೂಹಿಕ ಅಂತ್ಯಸಂಸ್ಕಾರ ಮಾಡಲಾಗಿದೆ.

- Advertisement -

Related news

error: Content is protected !!