Sunday, July 19, 2026
spot_imgspot_img
spot_imgspot_img

ಚೀನಾಗೆ ತೆರಳುತ್ತಿದ್ದ ತೈಲ ಟ್ಯಾಂಕರ್‌ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ – ಮಂಗಳೂರಿಗೆ ಬರುತ್ತಿದೆ ರಷ್ಯಾ ತೈಲ..!

- Advertisement -
- Advertisement -

ನವದೆಹಲಿ: ಚೀನಾಕ್ಕೆ ತೆರಳುತ್ತಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ದಕ್ಷಿಣ ಚೀನಾ ಸಮುದ್ರದಲ್ಲಿ ಯೂಟರ್ನ್‌ ಹೊಡೆದು ಮಂಗಳೂರಿನತ್ತ ಬರುತ್ತಿರುವುದಾಗಿ ತಿಳಿದುಬಂದಿದೆ.

ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಜನವರಿ ಅಂತ್ಯದಲ್ಲಿ ಬಾಲ್ಟಿಕ್ ಸಮುದ್ರದ ಬಂದರಿನಿಂದ ಯುರಲ್ಸ್ ಕಚ್ಚಾತೈಲವನ್ನು ಅಕ್ವಾ ಟೈಟಾನ್‌ ಹಡಗಿಗೆ ಲೋಡ್‌ ಮಾಡಲಾಗಿತ್ತು. ಈಗ ಈ ಹಡಗು ಯೂಟರ್ನ್‌ ಹೊಡೆದಿದ್ದು ಮಾರ್ಚ್‌ 21 ರಂದು ನವಮಂಗಳೂರಿಗೆ ಆಗಮಿಸುವ ಸಾಧ್ಯತೆಯಿದೆ.

ಮಾರ್ಚ್ ಮಧ್ಯದಲ್ಲಿ ಆಗ್ನೇಯ ಏಷ್ಯಾದಲ್ಲಿ ಸಂಚರಿಸುತ್ತಿದ್ದಾಗ ಚೀನಾದ ರಿಝಾವೊ ಬಂದರು ತನ್ನ ಗಮ್ಯ ಸ್ಥಾನ ಎಂದು ಅಕ್ವಾ ಟೈಟಾನ್‌ ತೋರಿಸುತ್ತಿತ್ತು. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟಿನಿಂದಾಗಿ ತೈಲ ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿರುವ ಹಿನ್ನೆಲೆ ಈ ವಾರ ಭಾರತ ರಷ್ಯಾದಿಂದ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲವನ್ನು ಖರೀದಿಸಿದೆ.

ವೋರ್ಟೆಕ್ಸಾ ಲಿಮಿಟೆಡ್ ಪ್ರಕಾರ ರಷ್ಯಾದ ತೈಲವನ್ನು ಹೊತ್ತುಕೊಂಡು ಚೀನಾಗೆ ಸಾಗಿಸುತ್ತಿದ್ದ ಏಳು ಟ್ಯಾಂಕರ್‌ಗಳು ಪ್ರಯಾಣ ಮಧ್ಯೆ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಪ್ರಯಾಣಿಸುತ್ತಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!