Sunday, June 21, 2026
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿ ಶಾಲೆ ವಿಟ್ಲದಲ್ಲಿ ಓಣಂ ಆಚರಣೆ

- Advertisement -
- Advertisement -

ವಿಟ್ಲ: ನಾಡಿನ ಸಂಪ್ರದಾಯ ಮತ್ತು ಸಾಂಸ್ಕೃತಿಕ ಆಚರಣೆಗಳು ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಂಧಗಳನ್ನು ಬಲಪಡಿಸುತ್ತದೆ. ಪ್ರಕೃತಿ ಮತ್ತು ಸಮಾಜದ ನಡುವಿನ ನಂಟು ಮನುಕುಲಕ್ಕೆ ಪುರಾಣ ಮತ್ತು ಹಿರಿಯರ ಬಳುವಳಿಯಿಂದ ಬಂದಿರುವುದು ಇದನ್ನು ಉಳಿಸುವ ಪ್ರಯತ್ನಕ್ಕೆ ವಿಠ್ಠಲ್ ಜೇಸಿ ಆಂಗ್ಲಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಎಲ್ಲಾ ಶಿಕ್ಷಕರು ಸೇರಿ ಓಣಂ ಆಚರಿಸಲಾಯಿತು.

ಶಿಕ್ಷಕರು ವಿದ್ಯಾರ್ಥಿಗಳು ಸೇರಿ ಪೂಕಲಂ ನ್ನು ರಚಿಸಿ ಶೃಂಗಾರಗೊಳಿಸಿದರು. ವಿದ್ಯಾರ್ಥಿನಿಯರು ಓಣಂ ಹಾಡನ್ನು ಹಾಡಿ ಸಂತಸಪಟ್ಟರು. ವಿದ್ಯಾರ್ಥಿನಿ ರಿಧ ಬೇಗಂ ಓಣಂ ದಿನದ ಸಂದೇಶವನ್ನು ತಿಳಿಸಿದರು. ಪ್ರಾಂಶುಪಾಲರು ಶುಭ ಹಾರೈಸಿದರು.ಶಿಕ್ಷಕಿ ಶಶಿಕಲ, ಸುಜಾತ ಹಾಗೂ ಲವೀನಾ ಈ ಕಾರ್ಯಕ್ರಮವನ್ನು ಸಂಯೋಜಿಸಿದರು.

- Advertisement -

Related news

error: Content is protected !!