- Advertisement -
- Advertisement -




ಕೋಟ,: ಗ್ಯಾಸ್ ಅಪ್‌ಡೇಟ್ ಹೆಸರಿನಲ್ಲಿ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಳಹಳ್ಳಿ ಗ್ರಾಮದ ಬಸವಪುರದ ಗಣಪತಿ ರಾಮಣ್ಣ ಶೆಟ್ಟಿ ಎಂಬವರ ಮೊಬೈಲ್‌ಗೆ ಫೆ.8ರಂದು ಕರೆ ಬಂದಿದ್ದು, ಮುಂಬೈ ಮಹಾನಗರ ಗ್ಯಾಸ್‌ನ ಅಪಡೇಟ್ ಮಾಡಲು ತಿಳಿಸಿ 12ರೂ. ಹಣ ಹಾಕಲು ತಿಳಿಸಿದ್ದರು. ಅದರಂತೆ ಗಣಪತಿ ಡೆಬಿಟ್ ಕಾರ್ಡನಿಂದ ಹಣವನ್ನು ಹಾಕಿದ್ದರು. ಆ ಬಳಿಕ ಫೆ.11ರಂದು ಹಾಗೂ 12ರಂದು ಇವರ ಖಾತೆಯಿಂದ 2,01,890ರೂ. ವರ್ಗಾವಣೆ ಮಾಡಿ ವಂಚಿಸಿರುವುದಾಗಿ ದೂರಲಾಗಿದೆ.
- Advertisement -








