Saturday, April 20, 2024
spot_imgspot_img
spot_imgspot_img

ಆನ್‌ಲೈನ್ ಲೋನ್ ಜಾಲ; ಮೂವರ ಬಂಧನ!!

- Advertisement -G L Acharya panikkar
- Advertisement -

ಬೆಂಗಳೂರು: ಆನ್ ಲೈನ್ ಆಯಪ್ ಮೂಲಕ ಸಾಲ ಕೊಡುವ ಮತ್ತೊಂದು ದಂಧೆ ರಾಜ್ಯದಲ್ಲಿ ಶುರುವಾಗಿದೆ. ಹೀಗೆ ಸಾಲಾ ನೀಡೋ ತರಾವರಿ ಕಂಪನಿಗಳು, ಕೊಟ್ಟ ಸಾಲ ವಾಪಾಸ್ ಕಟ್ಟದಿದ್ದರೇ, ಒಂದೆರಡು ಮೂರು ದಿನ ಲೇಟ್ ಆದ್ರೆ ಸಾಕು, ಸಾಲ ಪಡೆದಾತನಿಗೆ ಕಿರಿಕ್ ಮಾಡುತ್ತಾ, ಕಿರುಕುಳ ನೀಡುತ್ತಿದ್ದಂತ ಕಂಪನಿಯ ಮೇಲೆ ಸಿಸಿಬಿಗೆ ದೂರು ಬಂದ ಹಿನ್ನಲೆಯಲ್ಲಿ, ಇಂದು ರೈಡ್ ಕೂಡ ನಡೆಸಿದೆ.

ಬೆಂಗಳೂರಿನ ಕೋರಮಂಗಲದಲ್ಲಿದ್ದಂತ ಅಸೆಪೆರ್ಲ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಎನ್ನುವಂತ ಕಂಪನಿಯೊಂದು, ಆನ್ ಲೈನ್ ಆಪ್ ಸಾಲ, ಬಡ್ಡಿ ದಂಧೆಯಲ್ಲಿ ತೊಡಗಿತ್ತು. ಚೀನಾ ಆಯಪ್ ಮೂಲಕವೂ ಜನರಿಗೆ ಸಾಲ ನೀಡುತ್ತಿತ್ತು. ಅಧಿಕ ಬಡ್ಡಿಯಲ್ಲಿ ಸಾಲ ನೀಡುತ್ತಿದ್ದಂತ ಕಂಪನಿ, ಸಾಲ ಪಡೆದಂತ ಜನರಿಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು.

ಈ ಹಿನ್ನಲೆಯಲ್ಲಿ ಇಂದು ಸಿಸಿಬಿ ಪೊಲೀಸರು, ಅಸೆಪೆರ್ಲ್ ಸರ್ವಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿಯ ಮೇಲೆ ದಾಳಿ ನಡೆಸಿ, ಸಾಲ ಪಡೆದವರಿಗೆ ಕಿರುಕುಳ ನೀಡುತ್ತಿದದ್ದಂತ ಆರೋಪದ ಮೇಲೆ ಕಂಪನಿಯ ಮೂವರನ್ನು ಬಂಧಿಸಿದೆ. ಅಲ್ಲದೇ 35 ಲ್ಯಾಪ್ ಟಾಪ್, 200 ಬೇಸಿಕ್ ಮೊಬೈಲ್, ವಿವಿಧ 8 ಬ್ಯಾಂಕ್ ಗಳ ಚೆಕ್, 9 ಸೀಲ್, ವಿವಿಧ ಕಂಪನಿಯ 50 ಸಿಮ್ ವಶಕ್ಕೆ ಪಡೆದಿದೆ.

ಬಂಧಿತರಲ್ಲಿ ಚೀನಾ ಮೂಲದ ಇಬ್ಬರು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ನಡೆಸುತ್ತಿದ್ದೇವೆ. ಬಂಧಿತರು ಆಪ್ ಮಾಲೀಕರ ಅಣತಿಯಂತೆ ಕಾರ್ಯ ನಿರ್ವಹಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಎಲ್ಲಾ ಆಪ್‌ಗಳು ಆರ್‌ಬಿಐ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆನ್‌ಲೈನ್ ಆಪ್‌ ಗಳಲ್ಲಿ ಸಾಲ ಪಡೆಯದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಮನೀ ಡೇ.. ಪೈಸಾ ಪೇ, ಲೋನ್‌ ಟೈಮ್, ರುಪೀ ಡೇ, ರುಪೀ ಕಾರ್ಟ್‌, ಇನ್‌ ಕ್ಯಾಷ್ ಮತ್ತಿತರ ಆಪ್‌ಗಳ ಮೂಲಕ ಸಾಲ ಅಗತ್ಯವಿರುವರಿಗೆ ಆನ್‌ಲೈನ್ ನಲ್ಲಿಯೇ ನೀಡುತ್ತಿದ್ದರು. ಮೂರು ಸಾವಿರ ಸಾಲ ಮಂಜೂರು ಮಾಡಿ, ಬಡ್ಡಿ ಮುರಿದು ಕೊಂಡು ಕೇವಲ 1800 ರೂ. ಕೊಡುತ್ತಾರೆ. ಬಳಿಕ ಒಂದು ವಾರದಲ್ಲಿ ಮೂರು ಸಾವಿರ ರೂಪಾಯಿಗಳನ್ನು ವಸೂಲಿ ಮಾಡುತ್ತಾರೆ. ಕಾಲ ಮಿತಿಯಲ್ಲಿ ಪಾವತಿಸದಿದ್ದರೆ, ಮೊಬೈಲ್ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದರು.

ಈ ಕುರಿತು ಮೂರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವ ಸಿಸಿಬಿ ಸೈಬರ್ ಠಾಣೆ ಪೊಲೀಸರು ಮೊದಲ ಹಂತದಲ್ಲಿಯೇ ಆನ್‌ಲೈನ್ ಲೋನ್ ಆಪ್‌ಗಳ ಎಡೆಮುರಿ ಕಟ್ಟುವಲ್ಲಿ ಮಗ್ನರಾಗಿದ್ದಾರೆ. ಮತ್ತಷ್ಟು ಆರೋಪಿಗಳ ಬಂಧನ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!