Monday, June 15, 2026
spot_imgspot_img
spot_imgspot_img

ಆನ್‌ಲೈನ್‌ನಲ್ಲಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಹಿರಿಯಡ್ಕ: ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆರ್ಡೂರು ಗ್ರಾಮದ ನಿಶಾ ಬಿ.(33) ಎಂಬವರಿಗೆ ಅಪರಿಚಿತರು ಕರೆ ಮಾಡಿ ಹಣವನ್ನು ದ್ವಿಗುಣಗೊಳಿಸುವ ಬಗ್ಗೆ ತಿಳಿಸಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದರು. ಅದರಂತೆ ಅವರು ಜು.7ರಿಂದ ಜು.14ರ ಮಧ್ಯಾವಧಿಯಲ್ಲಿ ಒಟ್ಟು 1,12,366ರೂ. ಹಣವನ್ನು ಅಪರಿಚಿತ ಸೈಬರ್ ವಂಚಕರ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಈ ಮೂಲಕ ಆರೋಪಿಗಳು ನಿಶಾ ಅವರಿಗೆ ವಂಚಿಸಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!