Wednesday, June 26, 2024
spot_imgspot_img
spot_imgspot_img

‘ತಿರುಪತಿ ಕ್ಷೇತ್ರದಲ್ಲಿ ನಮೋ ವೆಂಕಟೇಶಾಯ ಮಾತ್ರ ಕೇಳಿಸ್ಬೇಕು’; ತಿಮ್ಮಪ್ಪನ ಸಾಕ್ಷಿಯಾಗಿ ಸಿಎಂ ನಾಯ್ಡು ಶಪಥ

- Advertisement -G L Acharya panikkar
- Advertisement -

ತಿರುಮಲವನ್ನು ಕೆಲವರು ಹಣ ಗಳಿಸಿರುವ ಕೇಂದ್ರವನ್ನಾಗಿ ಮಾಡಿದ್ದರು. ಭಕ್ತರಿಂದ ಸುಲಿಗೆ ಮಾಡ್ತಿದ್ದರು, ಕಾಳಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದರು. ನಮ್ಮ ಸರ್ಕಾರದಲ್ಲಿ ಇವುಗಳು ಇರೋದಿಲ್ಲ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಆಂಧ್ರ ಪ್ರದೇಶ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಅವರು ತಿರುಮಲ ತಿರುಪತಿ ಕ್ಷೇತ್ರಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದುಕೊಂಡರು. ಅಲ್ಲದೇ ಸಿಎಂ ಆದ ಬಳಿಕ ತಿರುಮಲದಲ್ಲೇ ಮೊದಲ ಸುದ್ದಿಗೋಷ್ಠಿಯನ್ನು ನಡೆಸಿದರು.

ಶ್ರೀ ವೆಂಕಟೇಶ್ವರ ನಮ್ಮ ಕುಲದೈವ, ಅವರಿಂದಲೇ ಕಾರ್ಯಕ್ರಮ ಆರಂಭವಾಗುತ್ತದೆ. ತಿಮ್ಮಪ್ಪನ ಆಶೀರ್ವಾದದಿಂದ ಹಂತ ಹಂತವಾಗಿ ಬೆಳೆದಿದ್ದೇನೆ. ಈ ಹಿಂದೆ ಶ್ರೀ ವೆಂಕಟೇಶ್ವರನಿಗೆ ರೇಷ್ಮೆ ವಸ್ತ್ರ ಸಮರ್ಪಿಸಲು ಬರುವಾಗ ಬಾಂಬ್ ಸ್ಫೋಟ ಮಾಡಿದ್ದರು. ಅಲ್ಲಿಯೂ ನನ್ನ ಕುಲದೈವವೇ ನನ್ನನ್ನು ಕಾಪಾಡಿತು. ಪ್ರತಿ ವರ್ಷ ಮೊಮ್ಮಗ ದೇವಾಂಶ್ ಜನ್ಮದಿನದಂದು ತಿರುಮಲದಲ್ಲಿ ಅನ್ನದಾನ ನಡೆಸುತ್ತೇವೆ. ತಿರುಮಲವು ಪವಿತ್ರವಾದ ದೈವಿಕ ನಿಲಯವಾಗಿದೆ. ತಿರುಮಲದಲ್ಲಿದ್ದರೆ ವೈಕುಂಠದಲ್ಲಿದ್ದಂತೆ ಭಾಸವಾಗುತ್ತದೆ, ಇಂತಹ ಕ್ಷೇತ್ರವನ್ನು ಅಪವಿತ್ರಗೊಳಿಸುವುದು ಸೂಕ್ತವಲ್ಲ ಎಂದು ನಾಯ್ಡು ತಿಳಿಸಿದ್ದಾರೆ.

ತಿರುಮಲವನ್ನು ಕೆಲವರು ಹಣ ಗಳಿಸಿರುವ ಕೇಂದ್ರವನ್ನಾಗಿ ಮಾಡಿದ್ದರು. ಭಕ್ತರಿಂದ ಸುಲಿಗೆ ಮಾಡ್ತಿದ್ದರು, ಕಾಳಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದರು. ನಮ್ಮ ಸರ್ಕಾರದಲ್ಲಿ ಇವುಗಳು ಇರೋದಿಲ್ಲ. ಈ ಹಿಂದಿನ ಸರ್ಕಾರವು ಇಲ್ಲಿ ಗಾಂಜಾ, ಅನ್ಯಧರ್ಮದ ಪ್ರಚಾರ, ಮದ್ಯ ಮತ್ತು ಮಾಂಸ ಅಂತ ಅಸಭ್ಯವಾಗಿ ವರ್ತಿಸಿತ್ತು. ಸಮಿತಿಯಲ್ಲಿ ತಮಗೆ ಇಷ್ಟ ಬಂದವರಿಗೆ ಸ್ಥಾನ ಕೊಟ್ಟು ಮದುವೆ ಸಮಾರಂಭಗಳಿಗೆ ಸ್ವಾಮಿಯನ್ನು ಮಾರಾಟ ಮಾಡುವ ಕೆಲಸ ಮಾಡಿದ್ದರು. ರಕ್ತಚಂದನ ಸ್ಮಗ್ಲಿಂಗ್ ಮಾಡುವವರಿಗೆ ಸೀಟುಗಳನ್ನ ಕೊಟ್ಟಿದ್ದರು. ದೃಢ ಸಂಕಲ್ಪದಿಂದ ಕೆಟ್ಟ ಸಂಸ್ಕೃತಿಗಳನ್ನು ದೂರ ಮಾಡ್ತೀನಿ ಎಂದು ನಾಯ್ಡು ಹೇಳಿದ್ದಾರೆ.

- Advertisement -

Related news

error: Content is protected !!