Monday, March 24, 2025
spot_imgspot_img
spot_imgspot_img

ಅಗತ್ಯ ಸೇವೆಯ ಮತದಾರರಿಗೆ ಪೋಸ್ಟಲ್ ವೋಟಿಂಗ್ ಸೆಂಟರ್ ಆರಂಭ

- Advertisement -
- Advertisement -

ಮಂಗಳೂರು, ಏ.19(ಕ.ವಾ):- ಅಗತ್ಯ ಸೇವೆಯ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಏಪ್ರಿಲ್ 21 ರವರೆಗೆ ಪೋಸ್ಟಲ್ ವೋಟಿಂಗ್ ಸೆಂಟರ್ ಅನ್ನು ನಗರದ ಜಿಲ್ಲಾಧಿಕಾರಿಯವರ ಕಚೇರಿಯ ಕೊಠಡಿ ಸಂಖ್ಯೆ 105 ರಲ್ಲಿ ತೆರೆಯಲಾಗಿದೆ. ಅಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 182 ಮಂದಿ ಅಗತ್ಯ ಸೇವೆಯ ಮತದಾರರಿದ್ದು, ಏ. 19ರಂದು 17 ಮಂದಿ ಮತದಾನ ಮಾಡಿದ್ದಾರೆ.

ಅಲ್ಲದೆ ಚುನಾವಣಾ ಕರ್ತವ್ಯದಲ್ಲಿರುವ ಮತದಾರರಿಗೆ ಸಂಬಂಧಿಸಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಏ. 20ರಂದು ನಡೆಯುವ ಎರಡನೇ ಹಂತದ ಮತಗಟ್ಟೆ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿರುವ ತರಬೇತಿ ಕೇಂದ್ರದಲ್ಲಿ ಸೌಲಭ್ಯ ಕೇಂದ್ರ ತೆರೆಯಲಾಗಿದೆ. ಎಲ್ಲಾ ಅರ್ಹ ಮತದಾರರು ಸೌಲಭ್ಯ ಕೇಂದ್ರದ ಮೂಲಕ ಮತದಾನ ಮಾಡಬಹುದಾಗಿದೆ.

ಪೊಲೀಸ್, ಹೋಂ ಗಾರ್ಡ್, ವಿಡಿಯೋಗ್ರಾಫರ್, ಚಾಲಕರು, ಕಂಡಕ್ಟರ್ ಗಳು ನಗರದ ಜಿಲ್ಲಾಧಿಕಾರಿಯ ಕಚೇರಿಯ ಕೊಠಡಿ ಸಂಖ್ಯೆ 109ರಲ್ಲಿ ತೆರೆಯಲಾಗಿರುವ ಸೌಲಭ್ಯ ಕೇಂದ್ರದಲ್ಲಿ ಏ. 20 ರಿಂದ 22 ರವರೆಗೆ ಕಚೇರಿ ಅವಧಿಯಲ್ಲಿ ಮತದಾನ ಮಾಡಬಹುದಾಗಿದೆ.

ಸೇವಾ ಮತದಾರರಲ್ಲಿ (ಸರ್ವಿಸ್ ವೋಟಸ್೯) ಈವರೆಗೆ 17 ಮತದಾರರು ಮತ ಚಲಾಯಿಸಿದ್ದಾರೆ ಎಂದು ಜಿಲ್ಲಾ ಅಂಚೆ ಮತ ಪತ್ರ ಸಮನ್ವಯಾಧಿಕಾರಿ ಪ್ರದೀಪ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!