- Advertisement -
- Advertisement -
ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಮಧ್ಯಪ್ರದೇಶದ ರೇವಾದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಅತೀ ದೊಡ್ಡ ಸೋಲಾರ್ ಪವರ್ ಪ್ಲ್ಯಾಂಟ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಸೋಲಾರ್ ಶಕ್ತಿ 21ನೇ ಶತಮಾನದ ಶಕ್ತಿ ಮಾಧ್ಯಮವಾಗಿ ಮುಂದುವರೆಯಲಿದೆ ಎಂದು ಹೇಳಿದರು.
ಸೋಲಾರ್ ಶಕ್ತಿ ಖಚಿತವಾಗಿದ್ದು, ಶುದ್ಧವಾದುದ್ದು ಹಾಗೂ ಸುರಕ್ಷಿತವಾದದ್ದು. ಈ ಪವರ್ ಪ್ಲ್ಯಾಂಟ್ ನಿಂದ ಸ್ಥಳೀಯ ಕಾರ್ಖಾನೆಗಳಿಗೆ ವಿದ್ಯುತ್ ಸೌಲಭ್ಯ ಸಿಗುವುದಲ್ಲದೇ, ದೆಹಲಿಯ ಮೆಟ್ರೋ ರೈಲಿಗೂ ಸಹಾಯವಾಗಲಿದೆ ಎಂದು ತಿಳಿಸಿದರು.ಸೋಲಾರ್ ಪವರ್ ಪ್ಲ್ಯಾಂಟ್ ರೇವಾದಲ್ಲಿ ಮಾತ್ರವಲ್ಲದೆ, ಶಜಾಪುರ್, ನೀಮುಜ್, ಚತರ್ ಪುರ್ ನಲ್ಲೂ ಸಹ ಪವರ್ ಪ್ಲ್ಯಾಂಟ್ ಗಳಾಗಿ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಈ ಪವರ್ ಪ್ಲ್ಯಾಂಟ್ 750 ಮೆಗಾ ವ್ಯಾಟ್ ಕ್ಲೀನ್ ಎನರ್ಜಿ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದರು.
- Advertisement -