Sunday, September 13, 2026
spot_imgspot_img
spot_imgspot_img

ಒಂದೇ ದಿನ 20 ಲಕ್ಷಕ್ಕೂ ಹೆಚ್ಚು ಟಿಕೆಟ್ ಬುಕಿಂಗ್: ರೈಲ್ವೇ ಇತಿಹಾಸದಲ್ಲೇ ಹೊಸ ದಾಖಲೆ

- Advertisement -
- Advertisement -

ನವದೆಹಲಿ: ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ ಪೋರ್ಟಲ್‌ನಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ರೈಲು ಟಿಕೆಟ್‌ಗಳು ಬುಕ್ ಆಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.

ಸೆ. 7ರಂದು ಐಆರ್‌ಟಿಸಿ ಮೂಲಕ ಒಟ್ಟು 20,06,353 ರೈಲು ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದ್ದು, ಇದು ಐಆರ್‌ಟಿಸಿ ಇತಿಹಾಸದಲ್ಲೇ ಒಂದೇ ದಿನದಲ್ಲಿ ನಡೆದ ಅತಿ ಹೆಚ್ಚು ಟಿಕೆಟ್ ಬುಕ್ಕಿಂಗ್‌ ಆಗಿದೆ.

ಕಳೆದ ವರ್ಷದ ಹಬ್ಬದ ಋತುವಿನಲ್ಲಿ ದಾಖಲಾಗಿದ್ದ ಗರಿಷ್ಠ 18,40,203 ಟಿಕೆಟ್‌ಗಳ ದಾಖಲೆಯನ್ನು ಹಿಂದಿಕ್ಕಿದ್ದಲ್ಲದೆ, ಸೆ. 8 ರಂದು ಮತ್ತೆ 19,50,699 ಬುಕ್ಕಿಂಗ್‌ಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ.

ಪ್ರಸ್ತುತ ಒಟ್ಟು ಕಾಯ್ದಿರಿಸಿದ ರೈಲ್ವೆ ಟಿಕೆಟ್‌ಗಳಲ್ಲಿ ಸುಮಾರು 89% ರಷ್ಟು ಆನ್‌ಲೈನ್‌ನಲ್ಲೇ ಬುಕ್ ಆಗುತ್ತಿವೆ. ದಿನದ ಒಟ್ಟು ಬುಕ್ಕಿಂಗ್‌ನಲ್ಲಿ ಕೇವಲ 8.43% ರಿಂದ 14.14% ರಷ್ಟು ಮಾತ್ರ ಮೊದಲ ಗಂಟೆಯಲ್ಲಿ(ಬೆಳಿಗ್ಗೆ 8 ರಿಂದ 9 ಗಂಟೆ) ಪೂರ್ಣಗೊಳ್ಳುತ್ತವೆ ಮತ್ತು 85% ಕ್ಕೂ ಹೆಚ್ಚು ಬುಕ್ಕಿಂಗ್‌ಗಳು ದಿನದ ನಂತರದ ಅವಧಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಅದರಲ್ಲೂ ಮೊದಲ 15 ನಿಮಿಷಗಳು(ಬೆಳಿಗ್ಗೆ 8 ರಿಂದ 8:15) ನಿರಂತರವಾಗಿ ಅತ್ಯಧಿಕ ಬುಕಿಂಗ್ ಪ್ರಮಾಣವನ್ನು ದಾಖಲಿಸುತ್ತವೆ.

ದಾಖಲೆ ಪ್ರಮಾಣದ ಬುಕ್ಕಿಂಗ್‌ಗಳು ನಡೆದ ಹೊರತಾಗಿಯೂ, ಹೊಸ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯಲ್ಲಿ ಯಾವುದೇ ಪ್ರಮುಖ ತಾಂತ್ರಿಕ ದೋಷ ಅಥವಾ ಸ್ಥಗಿತ ಸಂಭವಿಸಿಲ್ಲ ಎಂದು ಐಆರ್‌ಸಿಟಿಸಿ ತಿಳಿಸಿದೆ. ಹೆಚ್ಚುತ್ತಿರುವ ಟ್ರಾಫಿಕ್‌ ನಿಭಾಯಿಸಲು ಹೊಸ ಸರ್ವರ್‌ಗಳನ್ನು ಅಳವಡಿಸಲಾಗಿದ್ದು, ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ ವ್ಯವಸ್ಥೆಯ ಸಾಮರ್ಥ್ಯವನ್ನು ಸುಮಾರು ದುಪ್ಪಟ್ಟುಗೊಳಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!