Sunday, May 19, 2024
spot_imgspot_img
spot_imgspot_img

ಪಡುಬಿದ್ರಿ: ಟಿಪ್ಪರ್ ಮಗುಚಿ ಚಾಲಕ ಸಾವು!

- Advertisement -G L Acharya panikkar
- Advertisement -

ಪಡುಬಿದ್ರಿ: ಪಡುಬಿದ್ರಿ ಸಮೀಪದ ನಂದಿಕೂರು-ಮುದರಂಗಡಿ ರಸ್ತೆಯಲ್ಲಿ ಟಿಪ್ಪರ್ ಮಗುಚಿ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತಪಟ್ಟವರನ್ನು ಪಕ್ಷಿಕೆರೆ ನಿವಾಸಿ ಹರೀಶ್ ಕೋಟ್ಯಾನ್ (37) ಎಂದು ಗುರುತಿಸಲಾಗಿದೆ.

ನಂದಿಕೂರು ಇಂಡಸ್ಟ್ರಿಯಲ್ ಎಸ್ಟೇಟ್‍ಗೆ ಟಿಪ್ಪರ್ ನಲ್ಲಿ ಮಣ್ಣು ಸಾಗಿಸುತ್ತಿದ್ದು, ಈ ಹಿನ್ನೆಲೆ ಮಣ್ಣನ್ನು ಖಾಲಿ ಮಾಡುತ್ತಿರುವ ವೇಳೆ ಟಿಪ್ಪರ್ ಹರೀಶ್ ಮೇಲೆ ಮಗುಚಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಈ ಮೊದಲು ಬಸ್ಸು ಚಾಲಕನಾಗಿ ದುಡಿಯುತ್ತಿದ್ದರೆನ್ನಲಾಗಿದೆ. ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!