- Advertisement -
- Advertisement -

ಪಡುಬಿದ್ರಿ: ಪಡುಬಿದ್ರಿ ಸಮೀಪ ಟೆಂಪೊ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಸಾವನ್ನಪ್ಪಿದ್ದಾರೆ. ಮೃತಳನ್ನು ಪ್ರೇಕ್ಷಾ (22) ಎಂದು ಗುರುತಿಸಲಾಗಿದೆ.

ಅವರು ವಾಮಂಜೂರು ಕರಾವಳಿ ಕಾಲೇಜಿನ ಅಂತಿಮ ವರ್ಷದ ಡಿ ಫಾರ್ಮ್ ವಿದ್ಯಾರ್ಥಿನಿಯಾಗಿದ್ದರು. ಮೃತರು ತಾಯಿ ಮತ್ತು ಹಿರಿಯ ಸಹೋದರನನ್ನು ಅಗಲಿದ್ದಾರೆ. ನಾಲು ಬಿಲ್ಲಿ ತೋಟ ನಿವಾಸಿಯಾದ ಪ್ರೇಕ್ಷಾ ವಾಮಂಜೂರು ಕರಾವಳಿ ಕಾಲೇಜಿನಲ್ಲಿ ಪರೀಕ್ಷೆ ಮುಗಿಸಿ ಮನೆಯತ್ತ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಮಂಗಳೂರು ದಿಕ್ಕಿಗೆ ಸೇರುವ ಸರ್ವಿಸ್ ರಸ್ತೆಯಲ್ಲಿ ನಿಂತಿದ್ದ ಬಸ್ಸನ್ನು ಗಮನಿಸುತ್ತಾ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ದಿಕ್ಕಿನಿಂದ ವೇಗವಾಗಿ ಬಂದ ನಂದಿನಿ ಸಾಮಾನು ಸಾಗಿಸುವ ಗೂಡ್ಸ್ ಟೆಂಪೊ ನೇರವಾಗಿ ಗುದ್ದಿದೆ.



- Advertisement -








