Saturday, September 12, 2026
spot_imgspot_img
spot_imgspot_img

ಪಡುಬಿದ್ರಿ: ಅಕ್ಕಿ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿ

- Advertisement -
- Advertisement -

ಪಡುಬಿದ್ರಿ: ಕೋಟೇಶ್ವರದಿಂದ ಮಂಗಳೂರಿಗೆ ಅಕ್ಕಿ ಸಾಗಿಸುತ್ತಿದ್ದ ಪಿಕಪ್ ವಾಹನವೊಂದು ಪಲ್ಟಿಯಾದ ಘಟನೆ ನಡೆದಿದೆ. ಟಯರ್ ಸ್ಫೋಟಗೊಂಡ ಹಿನ್ನಲೆ ನಿಯಂತ್ರಣ ಕಳೆದುಕೊಂಡ ಪಿಕಪ್ ವಾಹನ ಪಲ್ಟಿಯಾಗಿದೆ. ಚಾಲಕ ಅದೃಷ್ಟವಶಾತ್ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ.

ಟೈಗರ್ ಬ್ರಾಂಡ್ ಅಕ್ಕಿ ಹೇರಿಕೊಂಡು ಬರುತ್ತಿದ್ದು ಇದ್ದಕ್ಕಿದಂತೆ ಟಯರ್ ಸ್ಫೋಟಗೊಂಡು ರಸ್ತೆಗೆ ಉರುಳಿ ಬಿದ್ದಿದೆ. ಆ ಸಂದರ್ಭ ಹೆದ್ದಾರಿಯಲ್ಲಿ ಯಾವುದೇ ವಾಹನಗಳು ಸಂಚರಿಸದಿರುವುದರಿಂದ ದುರಂತವೊಂದು ತಪ್ಪಿದೆ. ಅಕ್ಕಿ ಚೀಲಗಳು ಹೊಡೆದು ಹೋಗಿ ಅಕ್ಕಿ ರಸ್ತೆ ಎಲ್ಲೆಡೆ ಚೆಲ್ಲಿದೆ. ಸ್ಥಳಕ್ಕೆ ಬಂದ ಪಡುಬಿದ್ರಿ ಪೊಲೀಸರು ರಸ್ತೆಗಡ್ಡವಾಗಿ ಉರುಳಿದ ವಾಹನ ತೆರವು ಕಾರ್ಯ ನಡೆಸಿದ್ದಾರೆ.

- Advertisement -

Related news

error: Content is protected !!