ಸಾಧಕ ಮಹಿಳೆಯರಿಗೆ ಸನ್ಮಾನ “ವೀರರಾಣಿ ಅಬ್ಬಕ್ಕ ಗೌರವ-ಪುರಸ್ಕಾರ” ಕಾರ್ಯಕ್ರಮ
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.) ಮಂಗಳೂರು ವಿಭಾಗ ಹಾಗೂ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ಇತಿಹಾಸ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಅಬ್ಬಕ್ಕ 500 ರ ರಾಷ್ಟ್ರೀಯ ವಿಚಾರ ಸಂಕಿರಣದ 100 ನೇ ಸಂಭ್ರಮ, ಸಾಧಕ ಮಹಿಳೆಯರಿಗೆ ಸನ್ಮಾನ “ವೀರರಾಣಿ ಅಬ್ಬಕ್ಕ ಗೌರವ-ಪುರಸ್ಕಾರ” ಕಾರ್ಯಕ್ರಮ ಫೆಬ್ರವರಿ 16, 2026, ಸೋಮವಾರದಂದು ಪುತ್ತೂರು ನೆಹರುನಗರ ವಿವೇಕಾನಂದ ಕಾಲೇಜು ಆವರಣದಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ನಡೆಯಲಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ.), ಪುತ್ತೂರು ಅಧ್ಯಕ್ಷರು ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಶೋಭಾ ಕರಂದ್ಲಾಜೆ, ಕೇಂದ್ರ ಸಚಿವರು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ರಾಜ್ಯ ಸಚಿವಾಲಯ ಭಾರತ ಸರ್ಕಾರ, ನವದೆಹಲಿ ಇವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಯಾ. ಬ್ರಿಜೇಶ್ ಚೌಟ ಸಂಸದರು ದ.ಕ, ಕುಲದೀಪ್ ಎಂ. ಚೌಟ ಚೌಟರ ಅರಮನೆ ಮೂಡುಬಿದ್ರೆ, ಗುಂಟ ಲಕ್ಷ್ಮಣ್ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಎ.ಬಿ.ಆರ್.ಎಸ್.ಎಂ., ನವದೆಹಲಿ, ಮುರಳಿಕೃಷ್ಣ ಕೆ.ಎನ್. ನ್ಯಾಯವಾದಿಗಳು ಸಂಚಾಲಕರು, ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತು, ಪುತ್ತೂರು, ಪ್ರೊ. ಗುರುನಾಥ್ ಬಡಿಗೇರ ಅಧ್ಯಕ್ಷರು, ಕೆ.ಆರ್.ಎಂ.ಎಸ್.ಎಸ್, ಬೆಂಗಳೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕ ಮಹಿಳೆಯರಿಗೆ ವೀರರಾಣಿ ಅಬ್ಬಕ್ಕ-ಗೌರವ ಪುರಸ್ಕಾರ ನೀಡಲಾಗುವುದು.ಮಹಿಳಾ ಸಬಲೀಕರಣ ಕ್ಷೇತ್ರದ ಸಾಧಕಿ ಶ್ರೀಮತಿ ಸುರೇಖಾ ಶೆಟ್ಟಿ, ರಿಜಿಸ್ಟ್ರಾರ್ ಜನರಲ್ ಅಲಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರು, ದೈವಾರಾಧನೆ ಮತ್ತು ಮಾದಿರ ಕುಣಿತ ಹಿರಿಯ ಜಾನಪದ ಕಲಾವಿದೆ ಕಮಲಾ ನಲಿಕೆ ಪೆರುವಾಯಿ, ಸಮಾಜ ಸೇವೆ ಮತ್ತು ಸಂಘಟನಾ ಕ್ಷೇತ್ರದ ಸಾಧಕಿ ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರು ಡಾ. ಆಶಾ ಜ್ಯೋತಿ ರೈ, ರುದ್ರಭೂಮಿಯಲ್ಲಿ ಸೇವೆ ಗೈಯುತ್ತಿರುವ ವಜನಾ ಪೂಜಾರ್ತಿ ಬೀಡಿನಗುಡ್ಡೆ ಉಡುಪಿ, ಮೂಡಬಿದ್ರೆಯ ಆಳ್ವಾಸ್ ಫಾರ್ಮಸಿಯ ಆಡಳಿತಾಧಿಕಾರಿಗಳು ಪ್ರಕೃತಿ ಚಿಕಿತ್ಸೆ ಮತ್ತು ಸಮಗ್ರ ಸ್ವಾಸ್ಥ್ಯ, ಕ್ಷೇತ್ರದ ಸಾಧಕಿ ಡಾ. ಗ್ರೀಷ್ಮಾ ವಿವೇಕ್ ಆಳ್ವ, ಬಾಲ ಸಂಸ್ಕಾರ-ಸಂಘಟನೆ ಕ್ಷೇತ್ರದ ಸಾಧಕಿ ತುಲುವೆರೆ ಕಲ (ರಿ) ಮಂಗಳೂರು ಅಧ್ಯಕ್ಷರು ಶ್ರೀಮತಿ ಗೀತಾ ಲಕ್ಷ್ಮೀಶ್, ಭಾರತೀಯ ಕಲೆಗಳ ಕ್ಷೇತ್ರದ ಸಾಧಕಿ ಮಂಗಳೂರು ನಾಟ್ಯಾರಾಧನ ಮತ್ತು ಯಕ್ಷಾರಾಧನ ಕಲಾಕೇಂದ್ರದ ನಿರ್ದೇಶಕಿ ವಿದುಷಿ ಶ್ರೀಮತಿ ಸುಮಂಗಲ ರತ್ನಾಕರ ರಾವ್, ನಾಟಿ ವೈದ್ಯೆ, ಶ್ರೀಮತಿ ಕೆ.ಬಿ ಅಮ್ಮಣ್ಣಿ, ಮಂಗಳೂರಿನ ಯಕ್ಷಗುರು ಶ್ರೀಮತಿ ಪೂರ್ಣಿಮಾ ಯತೀಶ್ ರೈ, ಉದ್ಯಮ ಶೀಲತೆ ಕ್ಷೇತ್ರದ ಸಾಧಕಿ ಶ್ರೀಮತಿ ಮಹಾಲಕ್ಷ್ಮೀ ಮಂಗಳಾ ಎಂಟರ್‌ಪ್ರೈಸಸ್ ದಾರಂದಕುಕ್ಕು ಪುತ್ತೂರು, ಆಂಬ್ಯುಲೆನ್ಸ್ ಚಾಲಕಿ ಶ್ರೀಮತಿ ಸಿ.ಎಸ್ ರಾಧಿಕ ಮಂಗಳೂರು. ತುಳು ಸಾಹಿತ್ಯ ಸಂಘಟನೆಯ ಉಡುಪಿ ತುಳುನಾಡ ಧ್ವನಿ ಅಂತರ್ಜಾಲ ಪತ್ರಿಕೆಯ ಶ್ರೀಮತಿ ಯಶೋಧ ಕೇಶವ್, ಜೈನ ಪ ಪೂ ಕಾಲೇಜು ಮೂಡಬಿದಿರೆ ಇಲ್ಲಿನ ಉಪನ್ಯಾಸಕರು ಶ್ರೀಮತಿ ಸಂಧ್ಯಾ, ಯಕ್ಷಗಾನ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮತಿ ಶುಭಾಶಯ ಜೈನ್, ಮಂಗಳೂರಿನ ಉದಯೋನ್ಮುಖ ಭರತನಾಟ್ಯ ಕಲಾವಿದೆ ಕುಮಾರಿ ಶುಶ್ರಾವ್ಯ ಯು, ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಶೈನ್ ಇಂಡಿಯಾ ಟ್ರಸ್ಟ್ ಅನಂತಾಡಿ ಬಂಟ್ವಾಳದ ಶ್ರೀಮತಿ ಭವ್ಯರಾಣಿ ಪಿ.ಸಿ, ಆಯುರ್ವೇದ ಕ್ಷೇತ್ರದಲ್ಲಿ ಎಸ್.ಡಿ.ಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ಶ್ರೀಮತಿ ರೂಪಲೇಖಾ, ಭರತನಾಟ್ಯ ಕಲಾವಿದೆ ವಿದೂಷಿ ಶ್ರೀಮತಿ ಶಾಲಿನಿ ಆತ್ಮಭೂಷಣ್, ತಾಳಮದ್ದಳೆ ಕಲಾವಿದೆ ಶ್ರೀಮತಿ ಶುಭಾ ಅಡಿಗ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಖ್ಯಾತ ನಿರೂಪಕಿ ವಿಕ್ರಮ ಟಿವಿ ಕುಮಾರಿ ಶಹನಾ ಮುಮ್ತಾಜ್ ನೆಲ್ಯಡ್ಕ, ಯೋಗ ಮತ್ತು ಧ್ಯಾನ ಶಿಕ್ಷಕಿ ಕುಮಾರಿ ಕೆ ಎನ್ ದೀಪಿಕಾ ಇವರಿಗೆ ವೀರರಾಣಿ ಅಬ್ಬಕ್ಕ-ಗೌರವ ಪುರಸ್ಕಾರ ನೀಡಿ ಗೌರವಿಸಲಾಗುವುದು.




ಬೆಳಗ್ಗೆ 11:45 80 12:30 ರವರೆಗೆ ರವೀಂದ್ರ ಪಿ. ಅಧ್ಯಕ್ಷರು, ವಿವೇಕಾನಂದ ಪ.ಪೂ. ಕಾಲೇಜು ಪುತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ಸಮಕಾಲೀನ ಸಂದರ್ಭದಲ್ಲಿ ರಾಣಿ ಅಬ್ಬಕ್ಕಳ ಪ್ರಸ್ತುತತೆ ಎಂಬ ವಿಷಯದ ಕುರಿತಾಗಿ ಖ್ಯಾತ ವಾಗ್ನಿ ಮತ್ತು ಚಿಂತಕರು ಶ್ರೀಕಾಂತ ಶೆಟ್ಟಿ, ಕಾರ್ಕಳ ಉಪನ್ಯಾಸ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 12:30 – 1:15 ರವರೆಗೆ ಡಾ. ಯಶೋದಾ ರಾಮಚಂದ್ರ ವಿಶ್ರಾಂತ ಪ್ರಾಂಶುಪಾಲರು ನೆಹರು ಮೆಮೋರಿಯಲ್ ಕಾಲೇಜು, ಸುಳ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಷಯ: ಭಾರತದ ಇತಿಹಾಸ – ರಾಣಿ ಅಬ್ಬಕ್ಕಳ ಕೊಡುಗೆ ಎನ್ನುವ ವಿಚಾರದ ಕುರಿತು ಡಾ. ತುಕಾರಾಂ ಪೂಜಾರಿ ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿ, ಬಂಟ್ವಾಳ ದ.ಕ. ಇವರು ಉಪನ್ಯಾಸ ನಡೆಸಿಕೊಡಲಿದ್ದಾರೆ.
ಮಧ್ಯಾಹ್ನ 01:15 ರಿಂದ 02:00 ರ ವರೆಗೆ ಕಲಾ ಸಾರಥಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ವೀರ ರಾಣಿ ಅಬ್ಬಕ್ಕ ಕಥಾ ಕೀರ್ತನೆ ನಡೆಯಲಿದೆ.ಮಧ್ಯಾಹ್ನ 2:00 ರಿಂದ 3:30 ರ ವೆರೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಡಾ. ಕೆ.ಎಂ. ಕೃಷ್ಣ ಭಟ್ ಕಾರ್ಯದರ್ಶಿಗಳು, ವಿವೇಕಾನಂದ ವಿದ್ಯಾವರ್ಧಕ ಸಂಘ [ರಿ] ಪುತ್ತೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಹಸಂಘಟನಾ ಕಾರ್ಯದರ್ಶಿ ಗುಂಟ ಲಕ್ಷ್ಮಣ್ ಸಮಾರೋಪ ಭಾಷಣ ಮಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರು ಕೋಟ ಶ್ರೀನಿವಾಸ ಪೂಜಾರಿ, ಜವನೆರ್ ಬೆದ್ರ [ರಿ] ಮೂಡಬಿದಿರೆ ಸಂಸ್ಥಾಪಕರು ಅಮರ್ ಕೋಟೆ, ವಿವೇಕಾನಂದ ಪದವಿ ಕಾಲೇಜು [ಸ್ವಾಯತ್ತ), ಪುತ್ತೂರು ಅಧ್ಯಕ್ಷರು ಶ್ರೀಪತಿ ಕಲ್ಲೂರಾಯ, ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ) ಪುತ್ತೂರು ಸಂಚಾಲಕರು, ನ್ಯಾಯವಾದಿಗಳು ಮುರಳಿಕೃಷ್ಣ ಕೆ.ಎನ್., ಎ.ಬಿ.ಆರ್.ಎಸ್.ಎಂ. ಕರ್ನಾಟಕ ಸಂಚಾಲಕರು ಶಿವಪೂಜಿ ಕೋಟಿ, ಬೆಂಗಳೂರು ಕೆ.ಆರ್.ಎಂ.ಎಸ್.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೋಹಿಣಿ ಕುಮಾರ್ ಹಿಲ್ಲಿ, ಬೆಂಗಳೂರು ಕೆ.ಆರ್.ಎಂ.ಎಸ್.ಎಸ್ ಸಂಘಟನಾ ಕಾರ್ಯದರ್ಶಿ ಡಾ. ಸಿ.ವಿ. ಮರಿದೇವರಮಠ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.








