Sunday, June 7, 2026
spot_imgspot_img
spot_imgspot_img

ಪಡುಬಿದ್ರಿ: ಕೊಲೆ ಯತ್ನ ಆರೋಪಿಯ ಬಂಧನ..!

- Advertisement -
- Advertisement -

ಪಡುಬಿದ್ರಿ: ಪೊಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಗ್ಲೋರಿಯಾ ಬಾರ್‌ನಲ್ಲಿ ಕುಡಿದು ಗಲಾಟೆ ಮಾಡಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಪಡುಬಿದ್ರಿ ಪೊಲೀಸರು ತಮಿಳುನಾಡು ರಾಜ್ಯದ ಕೃಷ್ಣಗಿರಿ ಎಂಬಲ್ಲಿ ಬಂಧಿಸಿದ್ದಾರೆ.

ಬಂದಿತ ಆರೋಪಿಯನ್ನು ತಮಿಳುನಾಡು ಮೂಲದ ಅಳಗೇಶ ಎಂದು ಗುರುತಿಸಲಾಗಿದೆ.

ದಿನಾಂಕ 15/07/25 ಪಡುಬಿದ್ರೆ ಪೋಲೀಸ್ ಠಾಣಾ ವ್ಯಾಪ್ತಿಯ ಕಾಂಜರಕಟ್ಟೆ ಗ್ಲೋರಿಯಾ ಬಾರ್‌ನಲ್ಲಿ ಪ್ರಕರಣದ ದೂರುದಾರರು ಸಾಂತೂರಿನ ಸತೀಶ್ ಆಚಾರ್ಯ ತನ್ನ ಸ್ನೇಹಿತರಾದ ನರಸಿಂಹ ಮತ್ತು ಕಾರ್ತಿಕ್ ಎಂಬವರೊಂದಿಗೆ ಮದ್ಯಪಾನ ಮಾಡುತ್ತಿದ್ದಾಗ ಆರೋಪಿ ಅಳಗೇಶ ಬಾರಿನ ಒಳಗಡೆ ಬಂದು ನರಸಿಂಹನಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿದಾಗ ಸತೀಶ್ ಆಚಾರ್ಯ ಯಾಕೆ ಗಲಾಟೆ ಮಾಡುತ್ತಿ ಎಂದು ಹೇಳಿ ಬಾರ್ ಕ್ಯಾಬಿನ್‌‌ನಿಂದ ಹೊರಗೆ ದೂಡಿದಾಗ ನೀನು ನರಸಿಂಹನಿಗೆ ಸಪೋರ್ಟ್ ಮಾಡುತ್ತೀಯಾ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿ ಅಳಗೇಶನು ತನ್ನಲ್ಲಿದ್ದ ಚೂರಿಯಿಂದ ಸತೀಶ್ ಆಚಾರ್ಯನ ತಲೆಗೆ ಮತ್ತು ಹೊಟ್ಟೆಗೆ ತಿವಿದು ಕೊಲೆಗೆ ಪ್ರಯತ್ನಪಟ್ಟಿದ್ದು ಬಳಿಕ ಬಾರಿಯಿಂದ ಓಡಿಹೋದ ಅಳಗೇಶನು ತನ್ನ ಸ್ವಂತ ಊರಾದ ತಮಿಳುನಾಡಿಗೆ ಹೋಗಿ ತಲೆಮೆರೆಸಿಕೊಂಡಿದ್ದನು.

ಚೂರಿ ಇರಿತದಿಂದ ತೀವ್ರ ಗಾಯಗೊಂಡ ಸತೀಶ್ ಆಚಾರ್ಯ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕರಾದ ಶ್ರೀ ಹರಿರಾಮ್ ಶಂಕರ IPS ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಸದಾನಂದ ಎಸ್ ನಾಯಕ್ ಮತ್ತು ಪರಮೇಶ್ವರ ಹೆಗಡೆ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾI ಹರ್ಷ ಪ್ರಿಯಾಂವಧ ರವರ ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಮಾನೆ ರವರು ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಶ್ರೀ ಸಕ್ತಿವೇಲು( ಕಾ.ಸು) ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಸಂದೇಶ ಕುಮಾರ್, ಶರಣ್ ಪುತ್ರನ್ ರವರನ್ನು ಒಳಗೊಂಡ ವಿಶೇಷ ತಂಡ ರಚಿಸಿ ತಮಿಳುನಾಡು ರಾಜ್ಯಕ್ಕೆ ಕಳುಹಿಸಿದ್ದು ಅಧಿಕಾರಿಗಳು ತಮಿಳುನಾಡು ರಾಜ್ಯದ ಈರೋಡ್, ಸೇಲಂ, ಕೃಷ್ಣಗಿರಿ ಜಿಲ್ಲೆಗಳಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿ ಆರೋಪಿ ಅಳಗೇಶ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Related news

error: Content is protected !!