Sunday, May 5, 2024
spot_imgspot_img
spot_imgspot_img

ಮಂಗಳೂರು: ಭಯೋತ್ಪಾದಕ ಸಂಘಟನೆ ಐಸಿಸ್ ನಂಟು ಪ್ರಕರಣ; ತೊಕ್ಕೊಟ್ಟುವಿನ ಮಝೀನ್ ಅಬ್ದುಲ್ ಎನ್‌ಐಎ ವಶಕ್ಕೆ

- Advertisement -G L Acharya panikkar
- Advertisement -
vtv vitla

ಮಂಗಳೂರು: ಭಯೋತ್ಪಾದಕ ಸಂಘಟನೆಯಾಗಿರುವ ಐಸಿಸ್​ ಜತೆ ನಂಟು ಹೊಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳದವರು ಮುಂದುವರಿಸಿರುವ ಕಾರ್ಯಾಚರಣೆಯಲ್ಲಿ ಇನ್ನಿಬ್ಬರು ಶಂಕಿತರು ಸಿಕ್ಕಿ ಹಾಕಿಕೊಂಡಿದ್ದಾರೆ. ಭಯೋತ್ಪಾದಕ ಹಿನ್ನೆಲೆಯಲ್ಲಿ ಇಬ್ಬರು ಶಂಕಿತರನ್ನು ಎನ್​ಐಎ ಬಂಧಿಸಿದೆ.

ಬಂಧಿತನನ್ನು ಮಂಗಳೂರಿನ ತೊಕ್ಕೊಟ್ಟುವಿನ ಬಬ್ಬುಕಟ್ಟೆ ನಿವಾಸಿ ಮಝೀನ್ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಶಂಕಿತ ಉಗ್ರ ಮಾಝ್ ಮುನೀರ್ ನೀಡಿದ ಮಾಹಿತಿಯ ಆಧಾರದಲ್ಲಿ ಅಬ್ದುಲ್ ರೆಹಮಾನ್ ನ್ನು ಎನ್ಐಎ ವಶಕ್ಕೆ ಪಡೆದಿದೆ. ಅಲ್ಲದೆ ದಾವಣಗೆರೆಯ ಹೊನ್ನಾಳಿಯ ನೂರಾನಿ ಮಸೀದಿ ಹತ್ತಿರದ ದೇವನಾಯಕನಹಳ್ಳಿ ನಿವಾಸಿ ನದೀಮ್ ಅಹ್ಮದ್ ಕೆ.ಎ. ಎಂಬಾತನನ್ನು ಎನ್ಐಎ ಅರೆಸ್ಟ್ ಮಾಡಿದೆ.

ಮಾಜ್ ಮುನೀರ್, ಮಝಿನ್ ಅಬ್ದುಲ್ ರೆಹಮಾನ್ ನನ್ನು ನೇಮಕ ಮಾಡಿಕೊಂಡಿದ್ದು, ಸೈಯದ್ ಯಾಸಿನ್ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್ ನ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು ನದೀಮ್ ಕೆ ಎ ನನ್ನು ನೇಮಕ ಮಾಡಿಕೊಂಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳು ಇಸ್ಲಾಮಿಕ್ ಸ್ಟೇಟ್‌ನ ಚಟುವಟಿಕೆಗಳನ್ನು ಮುಂದುವರಿಸಲು ದೊಡ್ಡ ಪಿತೂರಿಯ ಭಾಗವಾಗಿ ವಿಧ್ವಂಸಕ ಕೃತ್ಯಗಳನ್ನು ಮಾಡಲು ಮುಂದಾಗಿದ್ದರು. ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಈ ಹಿಂದೆ ಬಂಧಿಸಲಾಗಿತ್ತು. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ.

- Advertisement -

Related news

error: Content is protected !!