Tuesday, July 21, 2026
spot_imgspot_img
spot_imgspot_img

ಪಡುಬಿದ್ರೆ: ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು; ಪ್ರಕರಣ ದಾಖಲು

- Advertisement -
- Advertisement -

ಪಡುಬಿದ್ರೆ : ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಪಡುಬಿದ್ರೆ ಸಮೀಪದ ದೀನ್ ಸ್ಟ್ರೀಟ್‌ನಲ್ಲಿ ನಡೆದಿದೆ. ಮುಹಮ್ಮದ್ ಅಫ್ತಾಬ್ ಅಲಿ ಎಂಬವರ ತಾಯಿ ಮನೆಗೆ ಬೀಗ ಹಾಕಿ ಹತ್ತಿರದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಬುಧವಾರ(ಜ.29) ಮುಂಜಾನೆ ಮನೆಗೆ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ತುಂಡರಿಸಿ ಅದರಲ್ಲಿದ್ದ 7 ಪವನ್ ಚಿನ್ನದ ನೆಕ್ಲಸ್, 5 ಪವನ್ ತೂಕದ ಚಿನ್ನದ ನೆಕ್ಲಸ್, ಸುಮಾರು 3 ಪವನ್ ತೂಕದ ಚಿನ್ನದ ಸಣ್ಣ ಚೋಕರ್ ನೆಕ್ಲಸ್, ಸುಮಾರು 2.5 ಪವನ್ ತೂಕದ ಚಿನ್ನದ ಸಣ್ಣ ಚೋಕರ್ ನೆಕ್ಲಸ್ , 15 ಪವನ್ ತೂಕದ ಬಂಗಾರದ ಬಳೆಗಳು, 3 ಪವನ್ ತೂಕದ ಬಂಗಾರದ ಬ್ರೇಸ್ಟೇಟ್ ಸೇರಿದಂತೆ ಒಟ್ಟಾಗಿ 70 ಪವನ್ ತೂಕದ 48 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 50 ಸಾವಿರ ರೂ. ಮೌಲ್ಯದ ರಾಡೋ ವಾಚನ್ನು ಕಳವುಗೈದಿದ್ದಾರೆ.

ಸಿಮ್ ಒಳಗೊಂಡಿದ್ದ ಸಿಸಿಟಿವಿಯನ್ನೂ ಕದ್ದೊಯ್ದಿದ್ದು, ಆದರೆ ಅದರ ಸಿಮ್ ಸಂದೇಶವು ಮಗನ ಸಿಮ್‌ನಲ್ಲಿ ದಾಖಲಾಗಿದೆ ಎನ್ನಲಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಎಸ್ಸಿ ಹರಿರಾಂ ಶಂಕರ್, ಡಿವೈಎಸ್ಪಿ ಪ್ರಭು ಡಿ.ಟಿ., ಕಾಪು ವೃತ್ತ ನಿರೀಕ್ಷಕ ಅಜ್ಜತ್ ಅಲಿ, ಪಡುಬಿದ್ರಿ ಠಾಣಾಧಿಕಾರಿ ಶಕ್ತಿವೇಲು ಸಹಿತ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಬೆರಳಚ್ಚು ತಜ್ಞರು, ಶ್ವಾನ ದಳ, ವೈಜ್ಞಾನಿಕವಾಗಿ ತನಿಖೆ ನಡೆಸಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!