Saturday, April 27, 2024
spot_imgspot_img
spot_imgspot_img

ಪಾಕ್ ಜೈಲಲ್ಲಿದ್ದ ಮಹಿಳೆ 18 ವರ್ಷಗಳ ಬಳಿಕ ಭಾರತಕ್ಕೆ ವಾಪಸ್!

- Advertisement -G L Acharya panikkar
- Advertisement -

ನವದೆಹಲಿ: ತಪ್ಪು ಆರೋಪದ ಮೇಲೆ ಪಾಕಿಸ್ತಾನದ ಜೈಲು ಸೇರಿದ್ದ 65 ವರ್ಷದ ಮಹಿಳೆಯಬ್ಬರು 18 ವರ್ಷಗಳ ಬಳಿಕ ಬಿಡುಗಡೆಯಾಗಿ ಇಂದು ಭಾರತಕ್ಕೆ ಮರಳಿದ್ದಾರೆ.

ಹಸೀನಾ ಬೇಗಂ ಎಂಬವರು 18 ವರ್ಷದ ಹಿಂದೆ ತಮ್ಮ ಗಂಡನ ಸಂಬಂಧಿಕರನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದರು. ಆದರೆ ಬೇಗಂ ಪಾಸ್‌ಪೋರ್ಟ್ ಕಳೆದುಕೊಂಡ ಕಾರಣ ಅವರನ್ನ ಅಲ್ಲಿನ ಜೈಲಿನಲ್ಲಿ ಇರಿಸಲಾಗಿತ್ತು. ಈ ಸಂಬಂಧ ಕೋರ್ಟ್​ ವಿಚಾರಣೆ ನಡೆಸಿದಾಗ ತಮ್ಮದೇನೂ ತಪ್ಪಿಲ್ಲ ಎಂದು ಬೇಗಂ ಹೇಳಿದ್ದರು. ಹೀಗಾಗಿ ಪಾಕ್ ನ್ಯಾಯಾಲಯ ಈ ಸಂಬಂಧ ಮಾಹಿತಿ ಕೇಳಿತ್ತು.

ಬೇಗಂ ಅವರು ಔರಂಗಾಬಾದ್​ನ ಸಿಟಿ ಚೌಕ್ ನಿವಾಸಿ ಎಂದು ಔರಂಗಾಬಾದ್​​ ಪೊಲೀಸರು ಪಾಕಿಸ್ತಾನಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆ ಬೇಗಂ ಅವರನ್ನ ಕಳೆದ ವಾರ ಬಿಡುಗಡೆ ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಇಂದು ಬೇಗಂ ಭಾರತಕ್ಕೆ ಬಂದಿದ್ದಾರೆ.

ಭಾರತಕ್ಕೆ ಮರಳಿದ ಬೇಗಂ ಅವರನ್ನ ಸಂಬಂಧಿಕರು ಹಾಗೂ ಪೊಲೀಸರು ಬರಮಾಡಿಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೇಗಂ, ನನ್ನನ್ನು ಪಾಕಿಸ್ತಾನದಲ್ಲಿ ಬಲವಂತವಾಗಿ ಜೈಲಿನಲ್ಲಿರಿಸಿದ್ದರು. ಅಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಅನುಭವಿಸಿದೆ. ನನ್ನ ದೇಶಕ್ಕೆ ಮರಳಿದ ನಂತರ ನನಗೆ ನೆಮ್ಮದಿ ಎನಿಸುತ್ತಿದೆ. ನಾನು ಸ್ವರ್ಗದಲ್ಲಿದ್ದೇನೆ ಎಂಬಂತೆ ಭಾಸವಾಗ್ತಿದೆ ಎಂದು ಹೇಳಿದರು. ಈ ಪ್ರಕರಣದ ಕುರಿತು ವರದಿ ನೀಡಿದ ಔರಂಗಾಬಾದ್​ ಪೊಲೀಸರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

- Advertisement -

Related news

error: Content is protected !!