Friday, March 29, 2024
spot_imgspot_img
spot_imgspot_img

ಭೀಕರ ಅಪಘಾತಕ್ಕಿಡಾದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಸ್ಪೋರ್ಟ್ಸ್ ಕಾರ್ !

- Advertisement -G L Acharya panikkar
- Advertisement -

ಲಾಹೋರ್: ಪಾಕಿಸ್ತಾನದ ಆಲ್​ ರೌಂಡರ್​, ಭಾರತೀಯ ಟೆನ್ನಿಸ್​ ತಾರೆ ಸಾನಿಯಾ ಮಿರ್ಜಾ ಅವರ ಪತಿ ಶೊಯಬ್ ಮಲಿಕ್ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದಾರೆ.

ನಿನ್ನೆ ಲಾಹೋರ್​​ನಲ್ಲಿ ಮಲಿಕ್ ಅವರ ಐಷಾರಾಮಿ ಸ್ಪೋರ್ಟ್ಸ್​ ಕಾರು ಲಾರಿಯೊಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ನಿನ್ನೆ ಮಲಿಕ್, 6ನೇ ಆವೃತ್ತಿಯ ಪಾಕಿಸ್ತಾನ ಸೂಪರ್​ ಲೀಗ್​​ನ ಡ್ರಾಫ್ಟ್​ ಇವೆಂಟ್​​ನಲ್ಲಿ ಪಾಲ್ಗೊಂಡು ಹೋಟೆಲ್​​ಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮಲಿಕ್ ಕಾರಿನ ನಿಯಂತ್ರಣ ಕಳೆದುಕೊಂಡು, ರೆಸ್ಟೊರೆಂಟ್​​ವೊಂದರ ಬಳಿ ನಿಲ್ಲಿಸಲಾಗಿದ್ದ ಟ್ರಕ್​​​ಗೆ ಡಿಕ್ಕಿ ಹೊಡೆದಿದ್ದಾರೆ.

ವರದಿಯೊಂದರ ಪ್ರಕಾರ ಮಲಿಕ್, ವಹಾಬ್ ಅವರ ಕಾರನ್ನ ಓವರ್​​ಟೇಕ್ ಮಾಡಲು ಮುಂದಾದಾಗ ತನ್ನ ಸ್ಪೋರ್ಟ್ಸ್​ ಕಾರ್​​ನ ನಿಯಂತ್ರಣ ತಪ್ಪಿ ಲಾರಿಗೆ ಗುದ್ದಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್​ ಘಟನೆಯಲ್ಲಿ ಮಲಿಕ್​ಗೆ ಯಾವುದೇ ಹಾನಿಯಾಗದೆ, ಭಾರೀ ಅನಾಹುತದಿಂದ ಅವರು ಬಚಾವ್ ಆಗಿದ್ದಾರೆ.

- Advertisement -

Related news

error: Content is protected !!