ಇಸ್ಲಮಾಬಾದ್: ಪಾಕಿಸ್ತಾನ ಜೈಲಿನಲ್ಲಿ ಕೈದಿಯಾಗಿರುವ ಭಾರತೀಯ ನೌಕಪಡೆ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ವಿಚಾರದಲ್ಲಿ ಪಾಕ್ ಮತ್ತೆ ನರಿಬುದ್ಧಿ ಪ್ರದರ್ಶನ ಮಾಡಿದೆ. ಹೀಗಾಗಿ ಹೇಳೊದೊಂದು ಮಾಡೊದೊಂದು ಎಂದು ಪಾಕ್ ಕುತಂತ್ರ ಬುದ್ಧಿ ಮತ್ತೊಮ್ಮೆ ತೋರಿಸಿದೆ.
ಯಾವುದೇ ಅಡಚಣೆಯಿಲ್ಲದೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕು ಎಂದು ಭಾರತೀಯ ಧೂತವಾಸ ಅಧಿಕಾರಿಗಳು ಪಾಕ್ ಬಳಿ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪಾಕಿಸ್ತಾನ ಕೂಡ ಒಪ್ಪಿಕೊಂಡಿತ್ತು. ಆದರೆ ಪಾಕಿಸ್ತಾನ ಕೊಟ್ಟ ಮಾತಿಗೆ ನಡೆದುಕೊಳ್ಳದೆ ನರಿಬುದ್ಧಿ ಪ್ರದರ್ಶನ ಮಾಡಿದೆ.
ಯಾವುದೇ ಅಡ್ಡಿ ಮಾಡುವುದಿಲ್ಲ ಎಂದ ಪಾಕ್ ಭಾರತೀಯ ಅಧಿಕಾರಿಗಳ ಜತೆಗೆ ಪಾಕ್ ತನ್ನ ದೇಶದ ಅಧಿಕಾರಿಗಳನ್ನೂ ಕಳುಹಿಸಿದ್ದು, ಭೇಟಿಯ ವಿಡಿಯೋವನ್ನು ಮಾಡಿಸಿದೆ. ಇದಲ್ಲದೇ, ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಜಾಧವ್ ಅವರಿಂದ ಲಿಖಿತ ಹೇಳಿಕೆ ಪಡೆಯಲೂ ಪಾಕ್ ಅಡ್ಡಿಪಡಿಸಿದೆ. ಇದನ್ನು ಖಂಡಿಸಿ ಭಾರತೀಯ ಅಧಿಕಾರಿಗಳು ಹೋರಾಟ ನಡೆಸಿದ್ರೂ ಪಾಕ್ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.