Friday, June 5, 2026
spot_imgspot_img
spot_imgspot_img

ಕುಡಿದ ಮತ್ತಿನಲ್ಲಿ ಶಾಲಾ ಬಸ್ ಚಾಲನೆ; ಪಾದಚಾರಿ ಸಾವು

- Advertisement -
- Advertisement -

ಕುಡಿದು ಶಾಲಾ ಬಸ್​ ಚಾಲನೆ ಮಾಡಿ ಪಾದಚಾರಿಗೆ ಗುದ್ದಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನ ದೊಡ್ಡಬಾಣಸವಾಡಿ ಬಳಿ ನಡೆದಿದೆ.

ಆಂಜಿನಪ್ಪ ಮೃತ ವ್ಯಕ್ತಿ. ಚಾಲಕ ಸುಭಾಷ್ (30) ಕುಡಿದು ಶಾಲಾ ಬಸ್​ ಚಲಾಯಿಸುತ್ತಿದ್ದ ವ್ಯಕ್ತಿ. ಚಾಲಕ ಸುಭಾಷ್ ಅಕ್ಟೋಬರ್ 10 ರಂದು ಕಂಠಪೂರ್ತಿ ಕುಡಿದು 25 ಮಕ್ಕಳನ್ನು ಕೂರಿಸಿಕೊಂಡು ದೊಡ್ಡಬಾಣಸವಾಡಿ ಬಳಿ ಬಸ್​​ ​ಚಾಲನೆ ಮಾಡುತ್ತಿದ್ದಾಗ ಮೆಡಿಕಲ್ ಶಾಪ್​ನಿಂದ ಮನೆಗೆ ತೆರಳುತ್ತಿದ್ದ ಆಂಜಿನಪ್ಪಗೆ ಗುದ್ದಿದ್ದಾನೆ.

ಇದಕ್ಕೂ ಮೊದಲು ಆರೋಪಿ ಸುಭಾಷ್ ಓರ್ವ ಮಹಿಳೆಗೆ ಗುದ್ದಿದ್ದನು. ಅಪಘಾತದಲ್ಲಿ ಗಾಯಗೊಂಡಿದ್ದ ಆಂಜಿನಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಕ್ಟೋಬರ್ 11 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಣಸವಾಡಿ ಸಂಚಾರಿ ಪೊಲೀಸರು ಆರೋಪಿ ಚಾಲಕ ಸುಭಾಷ್​​ನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!