Sunday, June 29, 2025
spot_imgspot_img
spot_imgspot_img

ಪುಲ್ವಾಮಾ ಅಷ್ಟೇ ಅಲ್ಲ, ಮುಂಬೈ ಸ್ಪೋಟದಲ್ಲೂ ನಮ್ಮದೇ ಪಾತ್ರ- 11 ಲಷ್ಕರ್ ಉಗ್ರರು ನಮ್ಮವರು ಎಂದ ಪಾಕಿಸ್ತಾನ!!

- Advertisement -
- Advertisement -

ಇಸ್ಲಾಮಾಬಾದ್(ನ.13): ಪುಲ್ವಾಮಾ ದಾಳಿ ಅಷ್ಟೇ ಅಲ್ಲ ಮುಂಬೈ ಸ್ಪೋಟದಲ್ಲೂ ತನ್ನ ಕೈವಾಡವಿರುವುದನ್ನು ಪಾಕಿಸ್ತಾನ ಒಪ್ಪಿಕೊಂಡಿದೆ. ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಮುಂಬೈ ದಾಳಿಯಲ್ಲಿ ತನ್ನ ದೇಶದ ಹನ್ನೊಂದು ಭಯೋತ್ಪಾದಕರ ಉಪಸ್ಥಿತಿಯನ್ನು ದೃಢಪಡಿಸಿದೆ.

2008ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಅಲ್ ಫೌಜ್ ದೋಣಿ ಖರೀದಿಯಲ್ಲಿ ಭಾಗಿಯಾಗಿದ್ದ ಮುಲ್ತಾನ್‌ನ ಮುಹಮ್ಮದ್ ಅಮ್ಜದ್ ಖಾನ್ ಅವರನ್ನು 880 ಪುಟಗಳ ಉದ್ದದ ಪಟ್ಟಿಯಲ್ಲಿ ಹೆಸರಿಸಲಾಗಿದೆ. ಅಮ್ಜದ್ ಖಾನ್ಯ ಮಹಾ ಮೋಟೋ ಆರ್ ಬೋಟ್ ಎಂಜಿನ್, ಲೈಫ್ ಜಾಕೆಟ್ ಗಳು, ಕರಾಚಿಯ ಎಆರ್ ಝಡ್ ವಾಟರ್ ಸ್ಪೋರ್ಟ್ ನಿಂದ ಗಾಳಿ ತುಂಬಬಹುದಾದ ದೋಣಿಗಳನ್ನು ಖರೀದಿಸಿದ ನಂತರ ಇದನ್ನು ಭಾರತದ ವಾಣಿಜ್ಯ ನಗರಿಯ ಮೇಲಿನ ದಾಳಿಯಲ್ಲಿ ಬಳಸಲಾಯಿತು. ಅಲ್-ಹುಸೇನಿ ದೋಣಿಯ ಕ್ಯಾಪ್ಟನ್ ಆಗಿದ್ದ ಎಂದು ಸಹ ಉಲ್ಲೇಖಿಸಲಾಗಿದೆ.

ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಬಳಸಿದ ದೋಣಿಗಳ ಒಂಬತ್ತು ಸಿಬ್ಬಂದಿಯನ್ನೂ ಈ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪಟ್ಟಿಯಲ್ಲಿ ದೇಶದ 1210 ಕುಖ್ಯಾತ ಹಾಗೂ ಮೋಸ್ಟ್ ವಾಂಟೆಡ್ ಭಯೋತ್ಪಾದಕರನ್ನು ಉಲ್ಲೇಖಿಸಲಾಗಿದೆ. ಆದರೆ ಹಫೀಜ್ ಸಯೀದ್, ಮಸೂದ್ ಅಜರ್, ದಾವೂದ್ ಇಬ್ರಾಹಿಂ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪುಲ್ವಾಮಾ ದಾಳಿಯ ರೂವಾರಿ ತಾನೆಂದು ಪಾಕ್ ಸಚಿವರು ಸಂಸತ್ತಿನಲ್ಲೇ ಹೇಳಿದ್ದರು.

- Advertisement -

Related news

error: Content is protected !!