Friday, April 19, 2024
spot_imgspot_img
spot_imgspot_img

ವಿಟ್ಲ: ಮಂಗಳೂರು ಮೂಲದ ಯುವತಿ ಸಾವನ್ನಪ್ಪಿದ ಪ್ರಕರಣ; ಸಾವಿನ ಸುತ್ತ ಅನುಮಾನದ ಹುತ್ತ..! ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ ಡ್ರಗ್ಸ್ ಮಾಫಿಯಾದ ಕರಿಛಾಯೆ??

- Advertisement -G L Acharya panikkar
- Advertisement -

ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್ ಗೆ ಅತಿಥಿಯಾಗಿ ಬಂದ ಅತಿಥಿಯ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ಮೂಲದ ವೈದ್ಯೆ ಮೈಜೀ ಕರೋಲ್ ಫೆರ್ನಾಂಡೀಸ್ (32) ಆಡುವ ಕೆರೆಗೆ ಬಿದ್ದು ಮೃತರಾಗಿದ್ದಾರೆ. ಇದೊಂದು ಅಸಹಜ ಮರಣ ಅಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದ ಮೈಜೀ ಕರೋಲ್ ಫೆರ್ನಾಂಡೀಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಾರಣಾಸಿ ಪಾರ್ಮ್ ಗೆ ಕೆಲವು ದಿನಗಳ ಹಿಂದೆಯೂ ಆಗಮಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ವಿಟ್ಲ: ಅಡ್ಯನಡ್ಕ ವಾರಣಾಸಿ ಫಾರ್ಮ್‌ನ ಕೆರೆಗೆ ಬಿದ್ದು ಗಂಭೀರ ಸ್ಥಿತಿಯಲ್ಲಿದ್ದ ವೈದ್ಯೆ ಮೃತ್ಯು

ಸಾರ್ವಜನಿಕ ವಲಯದಿಂದ ಬೇರೆಯೇ ಮಾತು..?!

ಅಡ್ಯನಡ್ಕ ಹೇಳಿ ಕೇಳಿ ಕೇರಳ ಕರ್ನಾಟಕ ಗಡಿ ಪ್ರದೇಶ. ಇಲ್ಲಿ ಪೊಲೀಸರು ಎಷ್ಟೇ ಕಣ್ಗಾವಲು ಇಟ್ಟರೂ ಡ್ರಗ್ಸ್ ಮಾಫಿಯಾ ನಡೆಯುತ್ತಿದೆ ಎಂಬುವುದು ಇಲ್ಲಿನ ಸ್ಥಳೀಯ ಅಭಿಪ್ರಾಯವಾಗಿದೆ.. ವಾರಣಾಸಿ ಫಾರ್ಮ್ ಗೆ ಹೆಚ್ಚಾಗಿ ವಿದೇಶಿ ಪ್ರಜೆಗಳು ಮೋಜಿ ಮಸ್ತಿಗೆಂದು ಬರುತ್ತಾರೆ. ಅವರು ಡ್ರಗ್ಸ್ ಸೇವಿಸುತ್ತಾರೆ. ನಶೆ ಅಮಲಿನಲ್ಲಿ ಈ ಹಿಂದೆಯೂ ಇದೇ ಫಾರ್ಮ್ ನಲ್ಲಿ ಹಲವು ವಿದೇಶಿ ಸೇರಿದಂತೆ ಬೇರೆ ಬೇರೆ ಅವರು ಇರುವುದನ್ನು ಸ್ಥಳೀಯರು ಗಮನಿಸಿದ್ದರು ಎನ್ನಲಾಗಿದೆ. ಈ ಸಾವು ಸಹಜವಲ್ಲ. ಇದರ ಹಿಂದೆ ಡ್ರಗ್ಸ್ ಮಾಫಿಯಾದ ಶಂಕೆಯ ಹುತ್ತವನ್ನು ಬೆಳೆಸಿದೆ.

ಅಷ್ಟು ಮಾತ್ರವಲ್ಲದೆ ಈ ಫಾರ್ಮ್ನ ಒಳಗಡೆ ಸ್ಥಳೀಯರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದಾಗಿ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಇನ್ನು ಈ ಬಗ್ಗೆ ಮೃತಾಳ ಸಹೋದರಿ ಟ್ರೆಸ್ಟ ಡಯಾನ ಫೆರ್ನೆಂಡಿಸ್ ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿ ಮೃತರು ಈಜಲು ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ ಹೊರತು ಮೃತರ ಸಾವಿನಲ್ಲಿ ಬೇರೆ ಯಾವುದೇ ರೀತಿಯ ಸಂಶಯವಿರುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಅಲ್ಲಿನ ಸ್ಥಳೀಯರು ವಾರಣಾಸಿ ಫಾರ್ಮ್ ನ ಬಗ್ಗೆ ಮಾತನಾಡಿಕೊಳ್ಳುತ್ತಿರುವುದು ನಿಜಕ್ಕೂ ಅನುಮಾನಕ್ಕೆ ಇನ್ನಷ್ಟು ದಾರಿ ಮಾಡಿಕೊಟ್ಟಿದೆ.

- Advertisement -

Related news

error: Content is protected !!