Friday, May 17, 2024
spot_imgspot_img
spot_imgspot_img

ಒಳಮೊಗ್ರು ಪಂಚಾಯತ್ ಪಿಡಿಒ ಅವಿನಾಶ್ ಬಿ ಆರ್ ಸುಳ್ಯ ಶಾಸಕರ ಕಚೇರಿಗೆ ಆಪ್ತ ಸಹಾಯಕರಾಗಿ ವರ್ಗಾವಣೆ

- Advertisement -G L Acharya panikkar
- Advertisement -

ಒಳಮೊಗ್ರು ಪಂಚಾಯತ್ ಪಿಡಿಒ ಅವಿನಾಶ್ ಬಿ ಆರ್ ಒಳಮೊಗ್ರು ಗ್ರಾಮ ಪಂಚಾಯಿತಿನಿಂದ ವರ್ಗಾವಣೆಗೊಂಡು ಸುಳ್ಯ ಶಾಸಕಿ ಭಗೀರಥಿ ಮುರಳ್ಯರವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುವ ಮೂಲಕ ಉನ್ನತ ದರ್ಜೆಗೆ ತೆರಳುತ್ತಿದ್ದಾರೆ.

ಒಳಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿಯಿಂದ ತನ್ನ ಕರ್ತವ್ಯದ ಮೇರೆಗೆ ವರ್ಗಾವಣೆಗೊಳ್ಳುತ್ತಿರುವ ಪಿಡಿಓ ಅವಿನಾಶ್ ರವರ ಬಗ್ಗೆ ಗ್ರಾಮಸ್ಥರು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಲು ಕಾರಣವೇನು ಗೊತ್ತೇ…?

ಸರಕಾರದ ಒಬ್ಬ ನಿಷ್ಠಾವಂತ ಶುದ್ಧ ಹಸ್ತದ ಪ್ರಾಮಾಣಿಕ ಬಡವರ ಬಗ್ಗೆ ಅತಿಯಾದ ಕಾಳಜಿ ಇರುವ ಒಂದು ಗ್ರಾಮವನ್ನು ಸದೃಢ ಗ್ರಾಮವನ್ನಾಗಿ ಮಾಡುವ ಇಚ್ಛಾಶಕ್ತಿ ಇರುವ ಅಧಿಕಾರಿಯನ್ನು ಒಳಮೊಗ್ರು ಗ್ರಾಮಕ್ಕೆ ಕರೆ ತರಲು ಗ್ರಾಮಸ್ಥರು ತುಂಬಾ ಶ್ರಮಪಟ್ಟಿದ್ದರು.

ಬಂಟ್ವಾಳ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿನಾಶ್ ಬಿ ಆರ್ ರವರನ್ನು ಅಲ್ಲಿಯ ಶಾಸಕರಾದ ರಾಜೇಶ್ ನಾಯ್ಕ್ ಅವಿನಾಶ್ ಇವರನ್ನು ಬಿಟ್ಟುಕೊಡಲು ತಯಾರಿರಲಿಲ್ಲ. ಆದರೂ ರಾಜೇಶ್ ನಾಯ್ಕ್ ರವರನ್ನು ಮನ ಒಲಿಸುವಲ್ಲಿ ಸಫಲರಾಗಿದ್ದರು ಇಲ್ಲಿನ ಪಂಚಾಯತ್ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು.

ಒಬ್ಬ ನಿಷ್ಠಾವಂತ ಅಧಿಕಾರಿ ಗ್ರಾಮ ಪಂಚಾಯತ್ ಒಳಗೆ ಇದ್ದರೆ ಆ ಗ್ರಾಮದಲ್ಲಿ ಅಭಿವೃದ್ಧಿಯ ಮಹಾಪುರವೇ ಆಗುತ್ತೆ ಎಂಬುದಕ್ಕೆ ಉದಾಹರಣೆ ಒಳಮೊಗ್ರು ಗ್ರಾಮ ಪಂಚಾಯಿತ್ ನ ಸುಸಜ್ಜಿತ ಹೊಸ ಕಟ್ಟಡದ ನಿರ್ಮಾಣ.

ತಮ್ಮ ವ್ಯಾಪ್ತಿಯ ಗ್ರಾಮದ ಅತಿ ಬಡವರ ಮನೆಯನ್ನೇ ಕೇಂದ್ರೀಕರಣವಾಗಿಟ್ಟುಕೊಂಡು ಅವಿನಾಶ್ ಅವರೇ ಅವರ ಮನೆಗಳಿಗೆ ಭೇಟಿ ನೀಡಿ ಅವರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳನ್ನು ಮನೆ ಮನೆಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಬ್ಬ ಯುವಕ ಸರಕಾರಿ ಕೆಲಸದಲ್ಲಿದ್ದು ಪ್ರಾಮಾಣಿಕವಾಗಿ ದುಡಿಯುತ್ತಿರುವುದು ಇಂದಿನ ಕಾಲಘಟ್ಟದಲ್ಲಿ ಬಲು ಅಪರೂಪ
ಯಾರೇ ಆಗಲಿ ಸಮಸ್ಯೆಯನ್ನು ಹೊತ್ತುಕೊಂಡು ಪಂಚಾಯಿತ್ ಗೆ ಹೋದಲ್ಲಿ ಅವರ ಕೆಲಸ ಆಗದೆ ಅವರನ್ನು ಹಿಂದೆ ಕಳುಹಿಸಿದ ಉದಾರಣೆ ಇಲ್ಲ. ಕರ್ನಾಟಕ ಸರಕಾರದ ಯಾವುದೇ ಕಾಮಗಾರಿಗಳ ಬಿಲ್ ಪಾಸ್ ಆಗಬೇಕೆಂದರೆ ನೇರವಾಗಿ ಕಾಮಗಾರಿ ನಡೆದ ಸ್ಥಳಕ್ಕೆ ಹೋಗಿ ಕಾಮಗಾರಿಯ ಸ್ಥಿತಿಗತಿಯನ್ನು ನೋಡಿ ತಮ್ಮ ಬಜೆಟಿನ ಮೌಲ್ಯಕ್ಕೆ ಸರಿಯಾಗಿ ಕೆಲಸ ಆಗಿದ್ದರೆ ಮಾತ್ರ ಅಂತಹ ಬಿಲ್ಲುಗಳನ್ನು ಮಾತ್ರ ಪಾಸ್ ಮಾಡುತ್ತಿದ್ದರು.

ಒಳಮೊಗ್ರು ಗ್ರಾಮದ ಕೆಲಸದಲ್ಲಿ ಕೆಲವು ಕಾಂಟ್ರಾಕ್ಟ್ ದಾರರಿಗೆ ಇವರಂತೂ ಬಿಸಿ ತುಪ್ಪವಾಗಿದ್ದು ಖಂಡಿತ ಇಂತಹ ನಿಷ್ಠಾವಂತ ಅಧಿಕಾರಿಯನ್ನು ಅನಿವಾರ್ಯವಾಗಿ ನಮ್ಮ ಗ್ರಾಮದಿಂದ ಬೀಳ್ಕೊಡಬೇಕಾಗಿ ಬಂದಿರುವುದು ಒಳಮೊಗ್ರು ಗ್ರಾಮಪಂಚಾಯತ್ ನ ವಿಪರ್ಯಾಸ.

ಇಂದು ಸುಳ್ಯದ ಶಾಸಕಿಯ ಆಪ್ತ ಸಹಾಯಕರಾಗಿ ಹೋಗುತ್ತಿರುವುದು ಸುಳ್ಯದ ಜನತೆಗೆ ಅತೀವ ಸಂತೋಷವಾಗಿರುವುದಂತೂ ನಿಜ. ಅವಿನಾಶ್ ನಿಮ್ಮ ಕರ್ತವ್ಯ ನಿಷ್ಠೆಗೆ ಭಗವಂತನ ಆಶೀರ್ವಾದದ ಜೊತೆಗೆ ಬಡವರ ಪ್ರೀತಿಯ ಹಾರೈಕೆ ಮತ್ತು ನಮ್ಮ ಶುಭ ಹಾರೈಕೆ.

- Advertisement -

Related news

error: Content is protected !!