ಮಂಗಳೂರು :-ಸರಕಾರಿ ಜಮೀನನ್ನು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನೊಬ್ಬ ಅಕ್ರಮವಾಗಿ ಒಂದು ಲಕ್ಷ ರೂಪಾಯಿಗಿಂತಲೂ ಹೆಚ್ಚು ಮೊತ್ತಕ್ಕೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿ ಅಕ್ರಮ ಎಸಗಿರುವ ಗಂಭೀರ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಬಂಟ್ವಾಳ ತಾಲ್ಲೂಕಿನ, ಇರ್ವತ್ತೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರು ಎಂಬಾತ ಅಕ್ರಮ ಎಸಗಿರುವ ಆರೋಪಿತ.
ಪ್ರಕರಣದ ಸಾರಾಂಶ; ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡು ಪಡುಕೋಡಿ ಗ್ರಾಮದಲ್ಲಿನ ಸರಕಾರಿ ಜಮೀನು ಸರ್ವೇ ನಂಬ್ರ 47/ ರನ್ನು ಅಕ್ರಮವಾಗಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಪೂಜಾರಿ ಎಂಬ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಮಾತ್ರವಲ್ಲದೇ ಈ ಮಾರಾಟ ಮಾಡಿರುವ ಕುರಿತು “ಎಗ್ರಿಮೆಂಟ್ ಯಾನೆ ಕರಾರು” ಪತ್ರವನ್ನು ಮಾಡಿಕೊಂಡು ಅದರಲ್ಲಿ ಗ್ರಾ.ಪಂ ಉಪಾಧ್ಯಕ್ಷ ಶಂಕರ್ ಶೆಟ್ಟಿ ಸಾಕ್ಷಿ ಹಾಕಿರುವ ಕಾರಣ ಈ ಪ್ರಕರಣದಲ್ಲಿ ಶಂಕರ್ ಶೆಟ್ಟಿ ಭಾಗಿಯಾಗಿರುವುದು ಹಾಗೂ ಈ ಸರಕಾರಿ ಜಮೀನನ್ನು 1,15,000 ರೂಪಾಯಿಗೆ ಡೀಲ್ ನಡೆಸಿರುವುದು ಕಂಡು ಬಂದಿದೆ. ಶಂಕರ್ ಶೆಟ್ಟಿ ಅಕ್ರಮ ಎಸಗಿರುವ ಕುರಿತು ಬಂಟ್ವಾಳ ತಹಶೀಲ್ದಾರ್ ಅವರಿಗೆ ದೂರು ನೀಡಿದ್ದು, ತನಿಖೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳುವ ಭರವಸೆ ತಹಶೀಲ್ದಾರ್ ಅವರು ನೀಡಿದ್ದಾರೆ. ಇನ್ನೂ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಇರ್ವತ್ತೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಕರಣಿಕರು ಗ್ರಾ.ಪಂ ವ್ಯಾಪ್ತಿಯ ಸರಕಾರಿ ಜಮೀನಲ್ಲಿ ಮನೆ ಕಟ್ಟುತ್ತಿರುವುದನ್ನು ತಕ್ಷಣವೇ ನಿಲ್ಲಿಸುವಂತೆ ನೋಟೀಸು ನೀಡಿದ್ದಾರೆ.
ಈ ಹಿಂದೆ ಇರ್ವತ್ತೂರು ಗ್ರಾ.ಪಂ ಉಪಾಧ್ಯಕ್ಷರಾಗಿದ್ದ ಶಂಕರ್ ಶೆಟ್ಟಿ ಅವರು ಮೂಡು ಪಡುಕೋಡಿ ಸರಕಾರಿ ಶಾಲೆಯ ನೀರಿನ ಟ್ಯಾಂಕಿನ ದುರಸ್ತಿ ಸಮಯದಲ್ಲಿ ಟ್ಯಾಂಕಿನ ಕಲ್ಲುಗಳನ್ನು ತನ್ನ ಮನೆಗೆ ಉಪಯೋಗ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಗೆ ಸ್ಥಳೀಯರೊಬ್ಬರು ದೂರು ನೀಡಿದ್ದರು. ಮಾತ್ರವಲ್ಲದೇ ಈ ಪ್ರಕರಣದ ಕುರಿತು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಅಕ್ರಮವಾಗಿ ಸರಕಾರಿ ಜಮೀನು ಮಾರಾಟ ಮಾಡಿದ ಆರೋಪ ಶಂಕರ್ ಶೆಟ್ಟಿ ಮೇಲೆ ಕೇಳಿ ಬಂದಿದೆ.
ಶಂಕರ್ ಶೆಟ್ಟಿ ವಿರುಧ್ದ ಲೋಕಾಯುಕ್ತಕ್ಕೂ ದೂರು!;