Tuesday, July 21, 2026
spot_imgspot_img
spot_imgspot_img

ಪಾಣೆಮಂಗಳೂರು:ಶ್ರೀ ಗುರು ಫ್ರೆಂಡ್ಸ್(ರಿ.) ಬೊಂಡಾಲ – 26ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯುವ ಮಹಾ ಮೃತ್ಯುಂಜಯ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

- Advertisement -
- Advertisement -

ಪಾಣೆಮಂಗಳೂರು: ಏಪ್ರಿಲ್ 26ರಿಂದ ಏಪ್ರಿಲ್ 27 ರ ತನಕ ಶ್ರೀ ಗುರು ಫ್ರೆಂಡ್ಸ್( ರಿ .) ಬೊಂಡಾಲ ಇದರ 26ನೇ ವಾರ್ಷಿಕೋತ್ಸವದ ಪ್ರಯುಕ್ತ ಶ್ರೀ ಮಹಾಗಣಪತಿ ದೇವಸ್ಥಾನದ ವಠಾರದಲ್ಲಿ ನಡೆಯುವ ಮಹಾ ಮೃತುಂಜಯ ಯಾಗದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದ ಸುಮುಖ ಭವನದಲ್ಲಿ ನಡೆಯಿತು .

ಸಭೆಯಲ್ಲಿ ಮಹಾಗಣಪತಿ ದೇವಸ್ಥಾನ ದ ಪ್ರಧಾನ ಅರ್ಚಕರು ಮಾದಕಟ್ಟೆ ಈಶ್ವರ ಭಟ್ ಮಾತಾಡಿ ಯಾಗದ ಮಾಹಿತಿ ನೀಡಿದರು.. ಲೋಕಕಲ್ಯಾಣರ್ಥವಾಗಿ ನಡೆಯುವ ಯಾಗದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದು ಶುಭ ಹಾರೈಸಿದರು .ಮಹಾಗಣಪತಿ ದೇವಸ್ಥಾನ ದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು ಪದ್ಮನಾಭ ಕೊಟ್ಟಾರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಊರಿನ ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಆಗುವಂತೆ ಸಹಕಾರ ನೀಡಬೇಕಾಗಿ ಸಲಹೆ ನೀಡಿದರು.ದೇವಸ್ಥಾನ ದ ಆಡಳಿತ ಮೊಕ್ತೇಸರರು ಜಯರಾಮ್ ಹೊಳ್ಳ ನಾಗ್ತಿಮಾರ್ ಶುಭ ಹಾರೈಸಿದರು. ವೇದಿಕೆಯಲ್ಲಿ ದೇವಸ್ಥಾನ ದ ಅರ್ಚಕರು ಶಿವಪ್ರಸಾದ್ ಭಟ್ ಶ್ರೀಗುರು ಫ್ರೆಂಡ್ಸ್ ಇದರ ಗೌರವ ,ಅಧ್ಯಕ್ಷರು ಸದಾಶಿವ ಸನಿಲ್ ,ಅಧ್ಯಕ್ಷರು ರಾಜೇಂದ್ರ ಬೊಂಡಾಲ ಉಪಸ್ಥಿತರಿದ್ದರು .ಕಾರ್ಯಕ್ರಮ ದಲ್ಲಿ ಊರಿನ ಹಿರಿಯರು.. ಸಂಘ ಸಂಸ್ಥೆ ಗಳ ಪ್ರಮುಖರು, ಮಹಿಳೆಯರು ಉಪಸ್ಥಿತರಿದ್ದರು.ನಾಗೇಶ್ ಶೆಟ್ಟಿ ಬೊಂಡಾಲ ಸ್ವಾಗತಿಸಿ ವಂದಿಸಿದರು

- Advertisement -

Related news

error: Content is protected !!