Friday, July 11, 2025
spot_imgspot_img
spot_imgspot_img

ತಡೆಗೋಡೆ ಕುಸಿತ- ಸಂಪರ್ಕ ಕಡಿತ-ಶಾಸಕರ ಭೇಟಿ

- Advertisement -
- Advertisement -

ವಿಟ್ಲ: ಪುಣಚ ಗ್ರಾಮದ ಮಲೆತ್ತಡ್ಕ ಎಂಬಲ್ಲಿ ತಡೆಗೋಡೆ ಕುಸಿದು ನಿಂತಿದ್ದ ಪ್ರಮುಖ ಸೇತುವೆಯ ಒಂದು ಪಾರ್ಶ್ವ ಕುಸಿದು ಸಂಪರ್ಕ ಕಡಿತಗೊಂಡ ಸ್ಥಳಕ್ಕೆ ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲಿಸಿದರು.


ಶುಕ್ರವಾರದಿಂದ ನಿರಂತರವಾಗಿ ಸುರಿಯುವ ಮಳೆಯಿಂದ ಭಾಗಶಃ ಕುಸಿದಿದ್ದ ಸೇತುವೆ ತಡೆಗೋಡೆ ಶನಿವಾರ ಬೆಳಗಿನಿಂದ ನಿರಂತರ ಕುಸಿಯುತ್ತಾ ಸಾಗಿದ್ದು, ಸೇತುವೆಯ ಅಡಿಪಾಯದ ತನಕ ಕುಸಿದಿದೆ. ತಡೆಗೋಡೆಯ ಕಲ್ಲು ಸಮೀಪದ ಅಡಿಕೆ ತೋಟಕ್ಕೆ ರಾಶಿ ಬಿದ್ದಿತ್ತು. ಅರ್ಧದಷ್ಟು ಡಾಮಾರು ರಸ್ತೆ ಜಲಪಾಲಾಗಿತ್ತು. ಇದರಿಂದ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.


ಈ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಪರಿಶೀಲನೆ ನಡೆಸಿ, ಬಳಿಕ ಮಾತನಾಡಿ ಇದೀಗ ಬಸ್ ಹಾಗೂ ವಾಹನ ಓಡಾಟ ಸ್ಥಗಿತಗೊಂಡಿದೆ. ತಕ್ಷಣವೇ ಕಾಮಗಾರಿ ನಡೆಸಲಾಗುವುದು. ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಮಾಡಿ, ಲೋಕೋಪಯೋಗಿ ಇಲಾಖೆಯವರು ಕಾಮಗಾರಿ ನಡೆಸಲಿದ್ದಾರೆ. ರಸ್ತೆ ಪಾಲನೆಯ ೨೫ ಲಕ್ಷ ಅನುದಾನದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯಲಿದೆ. ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕಾಮಗಾರಿಗೆ ತೊಂದರೆಯಾಗಿದೆ. ಮಳೆ ಬಿಟ್ಟ ಕೂಡಲೇ ಕಾಮಗಾರಿ ನಡೆಯಲಿದೆ ಎಂದರು.
,,,,,,,,,

- Advertisement -

Related news

error: Content is protected !!