Friday, April 26, 2024
spot_imgspot_img
spot_imgspot_img

ಬಂಗಾಳ ಟೈಗರ್ ಗಳಿಗೆ ರೇಡಿಯೋ ಕಾಲರ್ ಅಳವಡಿಸಲು ನಿರ್ಧಾರ

- Advertisement -G L Acharya panikkar
- Advertisement -

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಸುಂದರ್‍ಬನ್ ಟೈಗರ್ ರಿಸರ್ವ್‍ನಲ್ಲಿರುವ ಗಂಡು ಹುಲಿಗಳ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ರೇಡಿಯೋ ಕಾಲರ್ ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.


ರೇಡಿಯೋ ಕಾಲರ್ ಅಳವಡಿಕೆ ಸೇಫ್‍ಗಾರ್ಡ್ ಟೈಗರ್ ಅಭಿಯಾನದ ಉಪಕ್ರಮವಾಗಿದ್ದು, ಇದರಿಂದ ದೊಡ್ಡ ಬೆಕ್ಕುಗಳ ಆವಾಸಸ್ಥಾನ ಹಾಗೂ ಬಳಕೆಯ ಮಾದರಿಯನ್ನು ಮತ್ತು ಅವುಗಳ ವರ್ತನೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗಲಿದೆ ಎಂದು ಇಲಾಖೆಯ ಮುಖ್ಯ ವನ್ಯಜೀವಿ ವಾರ್ಡನ್ ವಿ.ಕೆ.ಯಾದವ್ ತಿಳಿಸಿದ್ದಾರೆ.


ಹುಲಿ ಮತ್ತು ಮನುಷ್ಯನ ನಡುವಿನ ಸಂವಹನವನ್ನು ರೇಡಿಯೋ-ಟೆಲಿಮೆಟ್ರಿ ಮೂಲಕ ಡಿ.27 ಮತ್ತು 28 ರಂದು ಮೌಲ್ಯಮಾಪನ ಮಾಡಲಾಗಿದ್ದು, ಈ ಕಾರ್ಯಾಚರಣೆಯನ್ನು ಹರಿಖಾಲಿ ಅರಣ್ಯದ ಬಾಶಿರತ್ ವಲಯದಲ್ಲಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಂವಹನ ಚಟುವಟಿಕೆಗಳ ಮೇಲ್ವಿಚಾರಣೆಯನ್ನು ನಾವು ಉಪಗ್ರಹ ಕಳಿಸುವ ದತ್ತಾಂಶಗಳ ಮೇಲೆ ಮಾಡುತ್ತೇವೆ. ವಿಶ್ವ ವನ್ಯಜೀವಿ ನಿಧಿ (ಡಬ್ಲ್ಯುಡಬ್ಲ್ಯುಎಫ್) ಸಹ ಈ ಮೇಲ್ವಿಚಾರಣೆ ಕಾರ್ಯದಲ್ಲಿ ತೊಡಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

Related news

error: Content is protected !!