Saturday, April 27, 2024
spot_imgspot_img
spot_imgspot_img

ಆರ್ಥಿಕ ಸಂಕಷ್ಟ: ದೇಶದಲ್ಲಿ ಅತಿ ಹೆಚ್ಚು ಆತ್ಮಹತ್ಯೆಗೆ ಶರಣಾಗುತ್ತಿರುವ ಹಿಂದೂ ಮಧ್ಯಮ ವರ್ಗ!!

- Advertisement -G L Acharya panikkar
- Advertisement -

ನವದೆಹಲಿ: ದೇಶದಲ್ಲಿ ರೈತರ ಪ್ರತಿಭಟನೆ ಮಧ್ಯೆ ಸದ್ದಿಲ್ಲದೆ ಮತ್ತೊಂದು ಆತಂಕಕಾರಿ ಘಟನೆ ನಡೆಯುತ್ತಿದೆ. ಲಾಕ್ ಡೌನ್ ಹಿಂತೆಗೆತದ ಬಳಿಕ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಆತ್ಮಹತ್ಯೆ ವರದಿಯಾಗಿದೆ ಹಾಗೂ ವರದಿಯಾಗುತ್ತಿದೆ.

ದೆಹಲಿಯಿಂದ ಆರಂಭಿಸಿ ಕೇರಳದ ತಿರುವನಂತಪುರದ ತನಕ ಇದೇ ಕಥೆ. ಬುಧವಾರ ಕೇರಳದ ತಿರುವನಂತಪುರದಂಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಆತ್ಮಹತ್ಯೆಗೆ ಶರಣಾಗಿದ್ದರು ಕಾರಣ ಆರ್ಥಿಕ ಸಂಕಷ್ಟ.

ಕೊರೋನಾದಿಂದಾಗಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ಎದುರಿಸಲು ಸಾಧ್ಯವಾಗದೆ ಕುಟುಂಬ ಆತ್ಮಹತ್ಯೆಯ ದಾರಿ ಹಿಡಿಯುತ್ತಿವೆ. ಸರ್ಕಾರ ಇದುವರೆಗೆ ಈ ಸಮಸ್ಯೆ ಬಗ್ಗೆ ಎಚ್ಚೆತ್ತುಕೊಂಡಿಲ್ಲ.ಆತ್ಮಹತ್ಯೆಗೆ ಶರಣಾದವರಲ್ಲಿ ಎಲ್ಲ ಧರ್ಮದವರಿದ್ದಾರೆ. ಆದರೆ ಇದರಲ್ಲಿ ಹಿಂದೂ ಮಧ್ಯಮ ವರ್ಗದ ಕುಟುಂಬ ಸದಸ್ಯರ ಸಂಖ್ಯೆ ಹೆಚ್ಚಾಗಿದೆ ಎಂಬುದು ಇದುವರೆಗಿನ ಮಾಹಿತಿ.

ಮಂಗಳೂರು ಸಮೀಪದ ಮೂಲ್ಕಿಯಲ್ಲಿ ಕುಟುಂಬ ಒಂದೇ ಕುಟುಂಬದ ಮೂವರು ಕಳೆದ ವಾರ ಆತ್ಮಹತ್ಯೆಗೆ ಶರಣಾಗಿದ್ದರು. ಪರಿಸ್ಥಿತಿ ಕೈ ಮೀರುವ ಮುನ್ನ ಸರ್ಕಾರ, ಸಮಸ್ಯೆ ಬಗೆಹರಿಸಬೇಕಾದ ಅನಿವಾರ್ಯತೆ ಇದೆ.

ಹಣಕಾಸು ಸಂಸ್ಥೆಗಳಿಂದ ನಿರಂತರ ಕಿರುಕುರಳ ಕರೆ, ಮನೆಗೆ ಬಂದು ಬೆದರಿಕೆ ಹೀಗೆ ನಾನಾ ಒತ್ತಡ ತಂತ್ರಗಳಿಗೆ ಬೇಸೆತ್ತು ಹೆಚ್ಚಿನ ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

- Advertisement -

Related news

error: Content is protected !!